ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಸಿನಿಮಾ ಇಂದು ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಿದ್ದು, ಮೊದಲ ದಿನವೇ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸೇರ್ವೇಗಾರ ಸಿಲ್ವರ್ ಸ್ಕ್ರೀನ್ಸ್ ಹಾಗೂ ಸುನಿ ಸಿನಿಮಾಸ್ ಸಂಸ್ಥೆಯ ಮೂಲಕ ದೀಪಕ್ ಮತ್ತು ಸಿಂಪಲ್ ಸುನಿ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಹೊಸ ಹೀರೋ ದುಷ್ಯಂತ್ ಅವರು ಅಭಿನಯಿಸಿದ್ದು, ಅವರಿಗೆ ಜೋಡಿಯಾಗಿ ತ್ರಿಭಾಷಾ ನಟಿ ಆಶಿಕಾ ರಂಗನಾಥ್ ನಟಿಸಿದ್ದಾರೆ.

ಗತವೈಭವ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಇದೊಂದು ಪ್ರೇಮಕಥೆಯ ಸಿನಿಮಾವಾಗಿದೆ. ಈ ಚಿತ್ರದಲ್ಲಿ ದುಷ್ಯಂತ್ ಹಾಗೂ ಆಶಿಕಾ ರಂಗನಾಥ್ ಆಕ್ಟಿಂಗ್ ನೋಡಿ ಪ್ರೇಕ್ಷಕರು ಪಿಧಾ ಆಗಿದ್ದಾರೆ. ಇನ್ನು ಈ ಸಿನಿಮಾ ಮೂಲಕ ಪ್ರೇಕ್ಷಕರಿಗೆ 4 ಡಿಫರೆಂಟ್ ಶೆಡ್ಗಳನ್ನು ಸಿಂಪಲ್ ಸುನಿ ಅವರು ಪರಿಚಯಿಸಿದ್ದಾರೆ.

ಹೌದು.. ಸಿಂಪಲ್ ಸುನಿ ಯಾವಾಗಲೂ ಕಥೆಗೆ ಹೆಚ್ಚು ಪ್ರಮುಖ್ಯತೆ ಕೊಟ್ಟು ಸಿನಿಮಾ ಮಾಡ್ತಾರೆ. ಹಾಗೆಯೇ ಈ ಬಾರಿಯೂ ‘ಗತವೈಭವ’ ಸಿನಿಮಾದಲ್ಲಿ ಕೂಡ ನಿರ್ದೇಶಕ ಸಿಂಪಲ್ ಸುನಿ ಅವರು ಕಥೆಗೆ ಮಹತ್ವ ನೀಡಿದ್ದಾರೆ. ಡಿಫರೆಂಟ್ ಏನೆಂದರೆ, ಈ ಸಿನಿಮಾದಲ್ಲಿ ಒಂದಲ್ಲ.. 4 ಕಥೆಗಳು ಇವೆ. ಪ್ರತಿ ಕಥೆ ಕೂಡ ಒಂದಕ್ಕೊಂದು ಬೆಸೆದುಕೊಂಡಿವೆ. ಆದರೆ ನಾಲ್ಕೂ ಕಥೆಗಳು ಬೇರೆ ಬೇರೆ ಫ್ಲೇವರ್ನಲ್ಲಿ ಇವೆ. ಪುರಾಣದಿಂದ ಶುರುವಾಗುವ ಕಥೆ ಈಗಿನ ಮಾಡರ್ನ್ ಕಾಲಕ್ಕೆ ಬಂದು ನಿಲ್ಲುತ್ತದೆ.

ಸುಧಾ ಬೆಳವಾಡಿ, ಕಿಶನ್ ಬಿಳಗಲಿ, ಕೃಷ್ಣ ಹೆಬ್ಬಾಳೆ, ಕೃಷ್ಣ ಜೋರಾಪುರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದು, ವಿಲಿಯಂ ಡೇವಿಡ್ ಛಾಯಾಚಿತ್ರಗ್ರಹಣವಿದೆ.
ಇದನ್ನೂ ಓದಿ : ಬಿಹಾರದಲ್ಲಿ NDA ಐತಿಹಾಸಿಕ ಜಯ.. 203 ಸ್ಥಾನಗಳಲ್ಲಿ ಗೆಲುವು – ದಾಖಲೆ ಬರೆದ ”ಮೋದಿ-ನಿತೀಶ್” ಜುಗಲ್ಬಂದಿ!







