ಬಿಹಾರದಲ್ಲೂ ವೋಟ್ ಚೋರಿ ಆಗಿದೆ, ಆದ್ರೆ ಜನರು ಕೊಟ್ಟಿರುವ ತೀರ್ಪು ಒಪ್ಪಿಕೊಳ್ಳಬೇಕು – ಸಿಎಂ ಸಿದ್ದರಾಮಯ್ಯ!

ಬಿಹಾರದಲ್ಲೂ ವೋಟ್ ಚೂರಿ ಆಗಿದೆ, ಆದ್ರೆ ಜನರು ಕೊಟ್ಟಿರುವ ತೀರ್ಪು ಒಪ್ಪಿಕೊಳ್ಳಬೇಕು. ಯಾಕೆ ಹಿನ್ನಡೆ ಆಗಿದೆ, ಯಾರು ವೋಟ್ ಹಾಕಿಲ್ಲ ಅನ್ನೋದು ಗೊತ್ತಿಲ್ಲ. NDA ಇಷ್ಟು ದೊಡ್ಡ ಬಹುಮತದಲ್ಲಿ ಗೆದ್ದಿರೋದು ಹೇಗೆ ಅನ್ನೋದು ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಾನು ಇನ್ನೂ ನೋಡಿಲ್ಲ, ಸರಿಯಾಗಿ ಮಾಹಿತಿ ಪಡೆದು ಮತ್ತೆ ಮಾತಾಡ್ತೀನಿ. ನಿತೀಶ್ ಕುಮಾರ್ ಯಾರು? ಅವರು ಓಬಿಸಿ ಅಲ್ಲವಾ? ಸಿಡಿಮಿಡಿಗೊಂಡಿದ್ದಾರೆ.

ಇದೇ ವೇಳೆ ಮುಧೋಳದಲ್ಲಿ ಕಬ್ಬು ಗಲಾಟೆ ವಿಚಾರವಾಗಿ ಮಾತನಾಡಿದ ಅವರು, ಬೇರೆ ಎಲ್ಲಾ ರೈತರು 3,300 ರೂ. ಕಬ್ಬು ರೇಟ್ ಪಡೆಯೋಕೆ ಒಪ್ಪಿಕೊಂಡಿದ್ದಾರೆ. ಆದರೆ ಮುಧೋಳ ರೈತರು ಮಾತ್ರ ಒಪ್ಪಿಕೊಂಡಿಲ್ಲ. ಅವರ ಜೊತೆಗೂ ಮಾತುಕತೆ ನಡೆಯುತ್ತಿದೆ. ಯಾರು ಕಬ್ಬು, ಟ್ರ‍್ಯಾಕ್ಟರ್, ಟ್ರಾಲಿಗಳನ್ನ ಸುಟ್ಟಿ ಹಾಕಿದ್ದಾರೆ ಅಂತ ವಿಚಾರಣೆ ಮಾಡಿಸೋಣ. ರೈತರು ನಾವು ಸುಟ್ಟಿಲ್ಲ ಅಂತ ಹೇಳ್ತಿದ್ದಾರೆ. ಅದಕ್ಕಾಗಿಯೇ ವಿಚಾರಣೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ತೀವಿ ಎಂದು ಹೇಳಿದ್ದಾರೆ.

ಇದನ್ನೂ ಓದಿ : ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ವಿಧಿವಶ!

Btv Kannada
Author: Btv Kannada

Read More