ಇಂದು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ – ಮತ ಎಣಿಕೆಗೆ ಕ್ಷಣ ಗಣನೆ!

ದೇಶದಲ್ಲಿ ಜನರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ನ.6 ಹಾಗೂ ನ.11ರಂದು ಎರಡು ಹಂತದಲ್ಲಿ ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಈ ಬಾರಿ ಬಿಹಾರದಲ್ಲಿ ದಾಖಲೆಯ ಮತದಾನವಾಗಿದ್ದು, ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂದು ಕಾದು ನೋಡಬೇಕಿದೆ. 243 ಸ್ಥಾನಗಳ ಎರಡು ಹಂತಗಳ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ 46 ಮತಗಟ್ಟೆಗಳಲ್ಲಿ ಪ್ರಾರಂಭವಾಗಲಿದೆ.

ಬಿಹಾರದಲ್ಲಿ ಈ ಬಾರಿ ಯಾರು ಅಧಿಕಾರಕ್ಕೆ ಬರಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದ್ದು, ಈ ಬಾರಿ ಯಾರೇ ಅಧಿಕಾರಕ್ಕೆ ಬಂದರೂ ದಾಖಲೆ ನಿರ್ಮಾಣವಾಗಲಿದೆ. ಬಿಹಾರ ಚುನಾವಣೆಯಲ್ಲಿ ಈ ಬಾರಿ ದಾಖಲೆಯ ಶೇ 67.13ರಷ್ಟು ಮತದಾನವಾಗಿದೆ. ಒಟ್ಟು 243 ಸದಸ್ಯಬಲವಿರುವ ಬಿಹಾರ ವಿಧಾನಸಭೆಯ ಮ್ಯಾಜಿಕ್ ಸಂಖ್ಯೆ 122 ಆಗಿದೆ. ಇನ್ನು ನವೆಂಬರ್ 6 ಹಾಗೂ ನವೆಂಬರ್ 11ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಚುನಾವಣಾ ಕಣದಲ್ಲಿ ರಾಜ್ಯದ ಐದು ಪ್ರಮುಖ ಪಕ್ಷಗಳು ಸೇರಿದಂತೆ ಪಕ್ಷೇತರರು ಸಹ ಸ್ಪರ್ಧೆ ಮಾಡಿದ್ದಾರೆ. ಕಣದಲ್ಲಿ 2,616 ಅಭ್ಯರ್ಥಿಗಳಿದ್ದರು. ಎಲ್ಲಾ ಚುನಾವಣೋತ್ತರ ಜೆಡಿಯು-ಬಿಜೆಪಿಯ ಎನ್‌ಡಿಎಗೆ ಬಹುಮತ ಬರಲಿವೆ ಎಂದು ಹೇಳಿದೆ.

ಬಿಹಾರದ ವಿಧಾನಸಭೆ ಚುನಾವಣೆಯ ಫಲಿತಾಂಶ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಚುನಾವಣೆಯ ಫಲಿತಾಂಶ ಭಾರೀ ಕುತೂಹಲ ಮೂಡಿಸಿದೆ. ಬಿಹಾರದಲ್ಲಿ ಯಾರು ಅಧಿಕಾರಕ್ಕೆ ಬರಲಿದ್ದಾರೆ ಎನ್ನುವ ಆಧಾರದ ಮೇಲೆ ಹಲವು ಪ್ರಮುಖ ರಾಜಕೀಯ ಬದಲಾವಣೆಗಳು ಆಗುವ ನಿರೀಕ್ಷೆ ಇದೆ.

ಬಿಹಾರದಲ್ಲಿ ಎನ್‌ಡಿಎ ಬಣದಲ್ಲಿ ಒಟ್ಟು ಐದು ಪಕ್ಷಗಳಿದ್ದು ಜೆಡಿಯು ಮತ್ತು ಬಿಜೆಪಿ ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಿವೆ. 41 ಕ್ಷೇತ್ರಗಳನ್ನು ಉಳಿದ ಪಕ್ಷಗಳು ಸ್ಪರ್ಧೆ ಮಾಡಿವೆ. ಇನ್ನು ಇಂಡಿಯಾ ಒಕ್ಕೂಟದಲ್ಲಿ ಆರ್‌ಜೆಡಿ, ಕಾಂಗ್ರೆಸ್‌, ಸಿಪಿಐ(ಎಂಎಲ್‌), ವಿಕಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಸೇರಿದಂತೆ ಹಲವು ಸಣ್ಣ ಪಕ್ಷಗಳಿವೆ.

ಇದನ್ನೂ ಓದಿ : GBA ಮುಖ್ಯ ಆಯುಕ್ತ ಮಹೇಶ್ವರ ರಾವ್​ರಿಂದ ಮಹತ್ವದ ಸಭೆ – 5 ನಗರ ನಿಗಮಗಳ ಆಯುಕ್ತರಿಗೆ ಮಹತ್ವದ ನಿರ್ದೇಶನ!

Btv Kannada
Author: Btv Kannada

Read More