ಜಮೀನು ವಿಚಾರಕ್ಕೆ ದಾಯಾದಿಗಳ ಮಧ್ಯೆ ಗಲಾಟೆ – ಸಹೋದರಿಯರ ಮೇಲೆಯೇ ಅಣ್ಣಂದಿರಿಂದ ಮಾರಣಾಂತಿಕ ಹಲ್ಲೆ!

ಕೋಲಾರ : ಕೋಲಾರ  ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಸಕ್ಕನಹಳ್ಳಿ ಗ್ರಾಮದಲ್ಲಿ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರ ನಡುವಿನ ವೈಷಮ್ಯವು ಮಾರಾಮಾರಿ ಹಂತಕ್ಕೆ ತಲುಪಿದ್ದು, ಅಣ್ಣಂದಿರೇ ತಮ್ಮ ತಂಗಿಯರ ಮೇಲೆ ದೊಣ್ಣೆಗಳಿಂದ ಕ್ರೂರವಾಗಿ ಹಲ್ಲೆ ಮಾಡಿದ ಘಟನೆ ವರದಿಯಾಗಿದೆ. ಮನೆ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ದಾಯಾದಿಗಳ ಮಧ್ಯೆ ಗಲಾಟೆ ಪ್ರಾರಂಭವಾಗಿದ್ದು, ಈ ಸಂದರ್ಭದಲ್ಲಿ ಸಹೋದರರಾದ ರಾಮಚಂದ್ರಶೆಟ್ಟಿ ಮತ್ತು ಕೃಷ್ಣಶೆಟ್ಟಿ ಅವರು ತಮ್ಮ ತಂಗಿಯರಾದ ಭಾರತಿ ಮತ್ತು ಸರಸ್ವತಿ ಎಂಬುವರ ಮೇಲೆ ದೊಣ್ಣೆಗಳಿಂದ ದಾಳಿ ಮಾಡಿದ್ದಾರೆ.

ಈ ಮಾರಣಾಂತಿಕ ಹಲ್ಲೆಯಿಂದಾಗಿ ಸರಸ್ವತಿ ಅವರ ಎರಡೂ ಕೈಗಳು ಮುರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕೃತ್ಯವನ್ನು ಭಾರತಿ ಅವರ ಪತಿ ವೇಣುಗೋಪಾಲ ಅವರ ಸಹೋದರರೇ ಎಸಗಿದ್ದಾರೆ ಎಂದು ಗಾಯಾಳು ಕುಟುಂಬವು ಆರೋಪಿಸಿದೆ. ಘಟನೆಗೆ ಸಂಬಂಧಿಸಿದಂತೆ ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಕರುನಾಡನ್ನು ಕುಣಿಸಲು ಮತ್ತೆ ಬರ್ತಿದೆ ‘ಡಾನ್ಸ್ ಕರ್ನಾಟಕ ಡಾನ್ಸ್’ – ಜೀ ಕನ್ನಡದಲ್ಲಿ ಇದೇ ನ.15 ರಿಂದ ಶುರು!

 

Btv Kannada
Author: Btv Kannada

Read More