ಬೆಂಗಳೂರು : ಬೆಂಗಳೂರು ಬಿಜೆಪಿ ಕಾರ್ಯಕರ್ತ ವೆಂಕಟೇಶ್ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಚೀಟಿ ಹಾಗೂ ಹಣಕಾಸು ನಷ್ಟದಿಂದಾಗಿ ಮನನೊಂದು ವೆಂಕಟೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಮಚೀಂದ್ರ ಹೇಳಿದ್ದಾರೆ.

ಈ ಬಗ್ಗೆ ಡಿಸಿಪಿ ಅಕ್ಷಯ್ ಮಚೀಂದ್ರ ಪ್ರತಿಕ್ರಿಯಿಸಿ, ವೈಯ್ಯಾಲಿ ಕಾವಲ್ ಟ್ರಾವೆಲ್ಸ್ನಲ್ಲಿ ವಾಸನೆ ಬರುತ್ತಿತ್ತು. ಈ ಬಗ್ಗೆ ಸ್ಥಳೀಯರು 112 ಗೆ ಕರೆ ಮಾಡಿದ್ದಾರೆ, ಪೊಲೀಸರು ಹೋಗಿ ನೋಡಿದಾಗ ಮೃತದೇಹ ಸಂಪೂರ್ಣವಾಗಿ ಕೊಳೆತು ಹೋಗಿತ್ತು. ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಕಳೆದ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ, ಘಟನೆ ಬಗ್ಗೆ ಸಂಬಂದ ವೈಯ್ಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಚೀಟಿ ವ್ಯವಹಾರ ಮಾಡುತ್ತಿದ್ದ ವೆಂಕಟೇಶ್ ಇತ್ತೀಚೆಗೆ ಚೀಟಿ ಹಣ ತೆಗೆದುಕೊಂಡವರು ಹಣ ಸರಿಯಾಗಿ ಕೊಟ್ಟಿರಲಿಲ್ಲ. ಹೀಗಾಗಿ ಉಳಿದವರು ಹಣ ಕೊಡುವಂತೆ ಕೇಳುತ್ತಿದ್ದರು, ಎಷ್ಟೇ ಪ್ರಯತ್ನ ಪಟ್ಟರು ಹಣ ರಿಕವರಿ ಆಗಿರಲಿಲ್ಲ. ಅಲ್ಲದೆ ಚೀಟಿ ಹಣವನ್ನ ಬಳಸಿಕೊಂಡಿದ್ದ ವೆಂಕಟೇಶ್ ಸುಮಾರು 70 ಲಕ್ಷ ಸಾಲ ಕೂಡ ಆಗಿತ್ತು. ಹೀಗಾಗಿ ವೆಂಕಟೇಶ್ ಆತ್ಮಹತ್ಯೆಗೆ ಶರಣಾಗಿದ್ದು, ಕಳೆದ ಎರೆಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ನಿನ್ನೆ ಸಂಜೆ ವಾಸನೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ವೆಂಕಟೇಶ್ ಮಕ್ಕಳು ಇರಲಿಲ್ಲ, ಪ್ರೀತಿಸಿ ಮದುವೆಯಾಗಿದ್ದು ಪತ್ನಿಯಿಂದ ವಿಚ್ಛೇದನ ಪಡೆದಿದ್ದರು. ವೆಂಕಟೇಶ್ ಕುಟುಂಬಸ್ಥರಿಂದಲೂ ಪ್ರತಿಕ್ರಿಯೆ ಇಲ್ಲ, ಸದ್ಯ ಬೋರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆ ನಂತರ ಮೃತದೇಹ ಹಸ್ತಾಂತರ ಮಾಡಲಾಗುತ್ತೆ ಎಂದರು.
ಜೀವನದಲ್ಲಿ ಚೀಟಿ ಏಜೆಂಟ್ ಮಾತ್ರ ಆಗುವುದಕ್ಕೆ ಹೋಗ್ಬೇಡಿ, 7 ಜನರು ನನಗೆ ಕೈಕೊಟ್ಟಿದ್ರು ಅದರಲ್ಲಿ ಮೂರು ಜನ ಸಾವನ್ನಪ್ಪಿದ್ದಾರೆ. ನಾಲ್ಕು ಜನ ನನಗೆ ಬಾಯಿಗೆ ಬಂದಂಗೆ ಮಾತಾಡಿದ್ದಾರೆ, ನಾನು ಕೊಡಬೇಕಿರೋದು 13-15 ಲಕ್ಷ ರೂ. ಕಲೆಕ್ಷನ್ ಆಗಬೇಕಿರೋದು 19 ಲಕ್ಷ, ಅದು ಆಗಲ್ಲ ಅಂತ ಗೊತ್ತು. ಏನಾದ್ರೂ ಮಾರಿ ಕೊಡೋನಾ ಅಂದ್ರೆ ನಂದು ಅಂತ ಏನು ಇಲ್ಲ, ಕಷ್ಟ ಅಂದ್ರೆ ಯಾರು ಹೆಲ್ಪ್ ಮಾಡಲ್ಲ. ನಾವು ಸಹಾಯ ಮಾಡಿದವರು ನನಗೆ ಸಹಾಯ ಮಾಡ್ಲಿಲ್ಲ ಯಾಕೆ ಬದುಕಬೇಕು, ನಾಲ್ಕು ಜನರು ನನಗೆ ಬಹಳ ಮಾನಸಿಕ ಹಿಂಸೆ ನೀಡಿದ್ರು ಎಂದು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಮಚೀಂದ್ರ ಹೇಳಿದರು.
ಇದನ್ನೂ ಓದಿ : ಅನ್ನ ಕೊಟ್ಟ ಕಲರ್ಸ್ ಕನ್ನಡ ಚಾನೆಲ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ಜಾಹ್ನವಿ – ವೀಕ್ಷಕರು ಕೆಂಡಾಮಂಡಲ!







