ಬಿಗ್ಬಾಸ್ ಕನ್ನಡದ ಸ್ಪರ್ಧಿಯಾಗಿರುವ ಜಾಹ್ನವಿ ಈ ಹಿಂದೆ ಕಲರ್ಸ್ ಕನ್ನಡ ವಾಹಿನಿ ಜೊತೆಗೆ ಕೆಲಸ ಮಾಡುತ್ತಿದ್ದರು. ಕಲರ್ಸ್ ಕನ್ನಡ ಚಾನಲ್ನ ನಮ್ಮಮ್ಮ ಸೂಪರ್ ಸ್ಟಾರ್ ಶೋನಲ್ಲಿ ಜಾಹ್ನವಿ ಮತ್ತವರ ಪುತ್ರ ಸ್ಪರ್ಧಿಸಿದರು. ಬಳಿಕ ಇದೇ ಚಾನೆಲ್‌ನಲ್ಲಿ ಪ್ರಸಾರವಾದ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ಜಾಹ್ನವಿ ರನ್ನರ್ ಅಪ್ ಆದರು. ಅಷ್ಟೇ ಅಲ್ಲದೆ ಜಾಹ್ನವಿ ಸವಿರುಚಿ ಮುಂತಾದ ಶೋಗಳ ಆಂಕರಿಂಗ್ ಸಹ ಮಾಡಿದ್ದರು. ಆದರೆ ಇದೀಗ ಅನ್ನ ಕೊಟ್ಟ ಕಲರ್ಸ್ ಕನ್ನಡ ಚಾನೆಲ್ ಬಗ್ಗೆಯೇ ಜಾಹ್ನವಿ ಕೆಟ್ಟದಾಗಿ ಮಾತನಾಡುತ್ತಿದ್ದು, ಜಾಹ್ನವಿ ವಿರುದ್ಧ ವೀಕ್ಷಕರು ಕೆಂಡಾಮಂಡಲರಾಗಿದ್ದಾರೆ.

ಬಿಗ್ ಬಾಸ್ ಸಂಪೂರ್ಣವಾಗಿ ನಡೆಯೋದು ಜನರ ವೋಟಿಂಗ್ ಆಧಾರದ ಮೇಲೆ. ಯಾರು ಉಳಿಯಬೇಕು, ಯಾರು ಇರಬಾರದು ಎಂಬುದನ್ನು ಜನರೇ ನಿರ್ಧರಿಸುತ್ತಾರೆ. ಆದರೆ, ಕೆಲವು ಸ್ಪರ್ಧಿಗಳು ಈ ಬಗ್ಗೆ ಅನುಮಾನ ಹೊರಹಾಕಿದ್ದು ಇದೆ. ಸ್ವತಃ ಜಾನ್ವಿ ಅವರೇ ಈ ಬಗ್ಗೆ ಮಾತನಾಡಿದ್ದು ಚರ್ಚೆಗೆ ಕಾರಣ ಆಗಿದೆ. ಜಾನ್ವಿ ಕೂಡ ಕಲರ್ಸ್ ಅಲ್ಲಿ ಶೋ ಮಾಡಿದ್ದಾರೆ. ಅವರು ಈ ರೀತಿ ಆರೋಪ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.
ಜಾನ್ವಿ, ಸೂರಜ್ ಹಾಗೂ ರಾಶಿಕಾ ಒಟ್ಟಿಗೆ ನಿಂತು ಮಾತನಾಡುತ್ತಿದ್ದರು. ಈ ವೇಳೆ ಜಾನ್ವಿ ಈ ವಾದ ಮುಂದೆ ಇಟ್ಟರು. ರಾಶಿಕಾ ಹಾಗು ಸೂರಜ್ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇದರಿಂದ ಚಾನೆಲ್ ಅವರು ಇವರನ್ನು ಕಳುಹಿಸಿಕೊಡಲ್ಲ ಎಂಬ ನಂಬಿಕೆಯಲ್ಲಿ ಜಾನ್ವಿ ಇದ್ದಂತೆ ಇದೆ. ಇದಕ್ಕೆ ಸೂರಜ್ ಉತ್ತರಿಸಿದ್ದಾರೆ. ‘ರಾಶಿ ಹಾಗೂ ಸೂರಜ್ ಮಧ್ಯೆ ಒಂದು ಲವ್ ಟ್ರ್ಯಾಕ್ ನಡೆಯುತ್ತಿದೆ. ಇದರಿಂದ ಚಾನೆಲ್ ಅವರು ಉಳಿಸುತ್ತಾರೆ ಎಂದು ನೀವು ಹೇಳ್ತಾ ಇದೀರಾ. ಇದು ತಪ್ಪು. ಮೊದಲನೆಯದಾಗಿ ನಮ್ಮ ಮಧ್ಯೆ ಲವ್ ಇಲ್ಲ. ಚಾನೆಲ್ ಆ್ಯಂಗಲ್ನಿಂದ ನೀವು ಮಾತನಾಡುತ್ತಿರುವುದು ಕೂಡ ತಪ್ಪೇ. ವೀಕೆಂಡ್ನಲ್ಲಿ ಈ ವಿಚಾರ ಬಂದ್ರೆ ಸಮಸ್ಯೆ ಆಗುತ್ತೆ. ನಿಮ್ಮ ಹಳ್ಳ ನೀವೇ ತೋಡಿಕೊಳ್ಳಬೇಡಿ’ ಎಂದು ಸೂರಜ್ ಅವರು ಜಾನ್ವಿಗೆ ಕಿವಿಮಾತು ಹೇಳಿದರು.

ನಂತರ ಇಡೀ ಮನೆಗೆ ಗೊತ್ತು ಸ್ಪಂದನಾ ವೀಕ್ ಅಂತ. ಯಾಕೆ ಸೇವ್ ಆಗುತ್ತಿದ್ದಾಳೆ? ಎಂದು ಜಾಹ್ನವಿ ಪ್ರಶ್ನೆ ಮಾಡಿದಾಗ, ‘’ಅವಳು ಲಕ್ಕಿ’’ ಅಂತಂದರು ಸೂರಜ್. ಅದಕ್ಕೆ ‘’ಅದೇ ಯಾಕೆ? ಅವಳಿಗೆ ಮಾತಾಡೋಕೆ ಬರಲ್ಲ. ಟಾಸ್ಕ್‌ನಲ್ಲೂ ಇಲ್ಲ. ಅವಳು ಇಲ್ಲಿ ಸೀರಿಯಲ್ ಹೀರೋಯಿನ್. ಮತ್ತು ಹೊರಗಡೆ ಫ್ಯಾನ್. ಆ ಆಂಗಲ್‌ನಲ್ಲೂ ನೋಡ್ತೀನಿ. ನನಗೊಂದು ಅಂದಾಜಿದು ಅಷ್ಟೇ. ಅವಳನ್ನ ಎತ್ತುತ್ತಾಯಿದ್ದಾರೆ ಅಂತ ನನಗೆ ಅನಿಸೋದು. ಯಾಕಂದ್ರೆ, ಮಾತಾಡೋಕೆ ಬರಲ್ಲ. ಪಾಪ.. ನಮ್ಮ ಚಾನೆಲ್‌ನವರು ನಮ್ಮ ಕಡೆಯವರು ಸುಮ್ನಿರಿ.. ಇನ್ನೇನು ಹೋಗ್ತಾಳೆ, ಹೋಗ್ತಾಳೆ ಎನ್ನುವಾಗ ಯಾಕೆ ಉಳ್ಕೊಳ್ತಾಳೆ. ಫ್ಯಾನ್ ಫಾಲೋವಿಂಗ್. ಅದೂ ಮ್ಯಾಟರ್ ಆಗುತ್ತೆ ಇಲ್ಲಿ’’ ಎಂದು ಜಾಹ್ನವಿ ಆರೋಪಿಸಿದ್ದಾರೆ.
ಹಾಗಾಗಿ ಅನ್ನ ಕೊಟ್ಟ ಕಲರ್ಸ್ ಕನ್ನಡ ಚಾನೆಲ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವ ಜಾಹ್ನವಿ ವಿರುದ್ಧ ವೀಕ್ಷಕರು ಕಿಡಿ ಕಾರಿದ್ದಾರೆ. ಈ ಬಗ್ಗೆ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಜಾಹ್ನವಿಗೆ ಕ್ಲಾಸ್ ತೆಗೆದುಕೊಳ್ಳೋ ಸಾಧ್ಯತೆಯಿದೆ. ಈ ಮೊದಲು ಆರ್ಯವರ್ಧನ್ ಗುರೂಜಿ ಅವರು ಇದೇ ರೀತಿಯ ಆರೋಪ ಮಾಡಿದ್ದರು. ಸುದೀಪ್ ಸಿಟ್ಟಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಈ ವಾರವೂ ಜಾನ್ವಿಗೆ ಇದೇ ರೀತಿಯ ಪಾಠ ಇರಬಹುದು.
ಇದನ್ನೂ ಓದಿ : ‘ಮಾರ್ಕ್’ ಶೂಟಿಂಗ್ ಕಂಪ್ಲೀಟ್.. ಪೋಸ್ಟ್ ಪ್ರೊಡಕ್ಷನ್ನಲ್ಲಿ ಕಿಚ್ಚನ ಚಿತ್ರ – ಡಿ.25ಕ್ಕೆ ಸಿನಿಮಾ ಎಂಟ್ರಿ ಕನ್ಫರ್ಮ್!







