ನೆಲಮಂಗಲ : ಇನ್ಸ್ಸ್ಟಾಗ್ರಾಮ್ನಲ್ಲಿ ಪತ್ನಿ ಮದ್ವೆ ನೋಡಿ ಪತಿ ಹಾಗೂ ಆತನ ಕುಟುಂಬಸ್ಥರು ಶಾಕ್ಗೆ ಒಳಗಾಗಿರುವ ಘಟನೆ ನೆಲಮಂಗಲ ಟೌನ್ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು.. ವರಿಸಿದ ಗಂಡನನ್ನು ಬಿಟ್ಟು Insta ಲವರ್ ಜೊತೆ ಪತ್ನಿ ಓಡಿ ಹೋಗಿದ್ದಾಳೆ. ಇನ್ಸ್ಸ್ಟಾಗ್ರಾಮ್ನಲ್ಲಿ ಶುರುವಾದ ಪರಿಚಯ ಒಂದು ವಾರದಲ್ಲೇ 5ಜಿ ಪ್ರೀತಿಗೆ ತಿರುಗಿ ಆ ಬಳಿಕ ಮದ್ವೆಯಲ್ಲಿ ಅಂತ್ಯವಾಗಿದೆ.
ನೇತ್ರಾವತಿ ಎಂಬ ಮಹಿಳೆ 13 ವರ್ಷದ ಹಿಂದೆ ನೆಲಮಂಗಲದ ರಮೇಶ್ ಎಂಬವರ ಜೊತೆ ಮದುವೆಯಾಗಿದ್ದಳು. ಇದೀಗ Insta ಹೊಸ ಬಾಯ್ಫ್ರೆಂಡ್ ಸಂತೋಷ್ ಜೊತೆ ಪರಾರಿಯಾಗಿದ್ದಾಳೆ. ವಾರದ ಹಿಂದೆ ನೇತ್ರಾವತಿ ಸಂತೋಷ್ ಜೊತೆ ಮದ್ವೆಯಾಗಿದ್ದು, ಮಕ್ಕಳು ಗಂಡನನ್ನು ಬಿಟ್ಟು ಹೋಗಿ ಸಂತೋಷ್ನನ್ನು ವರಿಸಿದ್ದಾಳೆ.
ಆ ಬಳಿಕ ನೇತ್ರಾ ಪೊಲೀಸ್ ಭದ್ರತೆಯಲ್ಲಿ ಮನೆಯಲ್ಲಿದ್ದ ಬಟ್ಟೆ ಒಯ್ಯಲು ಬಂದಿದ್ದಾಳೆ. ಇದನೆಲ್ಲಾ ನೋಡಿದ ರಮೇಶ್ ಹಾಗೂ ಆತನ ಕುಟುಂಬಸ್ಥರು ಶಾಕ್ಗೆ ಒಳಗಾಗಿದ್ದಾರೆ. ಸದ್ಯ ಈ ಸಂಬಂಧ ನೆಲಮಂಗಲ ಟೌನ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author: Btv Kannada
Post Views: 5,789