ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡ್ತೀನಿ – ಕೆ.ಎನ್ ರಾಜಣ್ಣ!

ತುಮಕೂರು : ಮುಂದೆ ನಾನು ಯಾವ ಬಾವುಟ ಹಿಡಿಯಬೇಕು ಎಂಬುದನ್ನು ಮುಂದಿನ ದಿನದಲ್ಲಿ ತೀರ್ಮಾನ ಮಾಡ್ತೇನೆ ಎಂದು ಮಾಜಿ‌ ಸಚಿವ ಕೆ ಎನ್ ರಾಜಣ್ಣ ಹೇಳಿದರು.

ಈ ಬಗ್ಗೆ ಮಧುಗಿರಿ ತಾಲೂಕಿನ ದೊಡ್ಡೆರಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ರಾಜಣ್ಣ,  2004 ರಲ್ಲಿ ನಾನು ಜೆಡಿಎಸ್‌ನಿಂದ ಸ್ಪರ್ಧಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ವೈಟ್ ವಾಶ್ ಮಾಡಿದ್ದೆವು. ಕಾಂಗ್ರೆಸ್‌ ಅನ್ನು ಕಂಪ್ಲೀಟ್ ಮುಗಿಸಿದ್ವಿ. ಜಿಲ್ಲೆಯಲ್ಲಿ ಮತ್ತೇ ಆ ಸಂದರ್ಭ ಬರುತ್ತೋ ಏನೋ ಗೊತ್ತಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಮತ್ತು ನನ್ನ ಅಭಿಮಾನಿಗಳು ಇಂದು ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯಲ್ಲಿ ಯಾರೂ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದಿರಲಿಲ್ಲ. ಅದು ಏಕೆ ಎಂದು ನನಗೂ ಗೊತ್ತಿಲ್ಲ. ಮುಂದೆ ನಾನು ಕೂಡ ಯಾವ ಬಾವುಟ ಹಿಡಿಯುತ್ತೇನೊ ಗೊತ್ತಿಲ್ಲ. ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ. ಜನರ ಬೆಂಬಲವೇ ನನಗೆ ಆನೆ ಬಲ. ಜನರನ್ನು ನಂಬಿ ನಾನು ರಾಜಕಾರಣ ಮಾಡುತ್ತಿದ್ದೇನೆ ಎಂದು ರಾಜಣ್ಣ ಹೇಳಿದರು.

ನನಗೂ ಮಧುಗಿರಿಗೂ ಯಾವ ಋಣಾನುಬಂಧವೊ ಗೊತ್ತಿಲ್ಲ. ತುಮಕೂರಿನಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಬೇಕು ಎಂದುಕೊಂಡಿದ್ದ ನನಗೆ ಮಧುಗಿರಿ ಕ್ಷೇತ್ರದ ಜನ ರಾಜಕೀಯ ಜನ್ಮನೀಡಿದರು ಎಂದರು.

ಇದನ್ನೂ ಓದಿ : ‘ಮಾರ್ನಮಿ’ ಟ್ರೇಲರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್ – ನ.28ಕ್ಕೆ ಸಿನಿಮಾ ತೆರೆಗೆ!

Btv Kannada
Author: Btv Kannada

Read More