ಕಲಬುರಗಿ : ಚಿತ್ತಾಪುರದಲ್ಲಿ RSS ಪಥಸಂಚಲನ ಯಾವ ದಿನ-ಸಮಯಕ್ಕೆ ನಡೆಯಲಿದೆ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳುವ ನಿರೀಕ್ಷೆಗಳಿದ್ದು, ಎಲ್ಲರ ಚಿತ್ತ ಕಲಬುರಗಿ ಹೈಕೋರ್ಟ್‌ನತ್ತ ನೆಟ್ಟಿದೆ.
ಅ.19ರಂದು ಪಥಸಂಚಲನ ನಡೆಸಲು RSSಗೆ ಅನುಮತಿ ನಿರಾಕರಿಸಿದ್ದ ಚಿತ್ತಾಪುರ ತಹಶೀಲ್ದಾರರ ಕ್ರಮ ಪ್ರಶ್ನಿಸಿ RSS ಜಿಲ್ಲಾ ಸಂಘಚಾಲಕ ಅಶೋಕ ಪಾಟೀಲ ಹೈಕೋರ್ಟ್ ಮೊರೆಹೋಗಿದ್ದರು. ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರ ಏಕಸದಸ್ಯ ನ್ಯಾಯಪೀಠ ಈ ಅರ್ಜಿ ವಿಚಾರಣೆ ನಡೆಸುತ್ತಿದೆ.
RSS ಸೇರಿ ಮನವಿ ಸಲ್ಲಿಸಿರುವ ಎಲ್ಲ ಸಂಘಟನೆಗಳಿಗೂ ಒಂದು ವಾರದೊಳಗೆ ಪಥಸಂಚಲನ ಅನುಮತಿ ನೀಡಲಾಗುವುದು. ಈ ಬಗ್ಗೆ ಸಂಘಟನೆಗಳಿಗೆ ಲಿಖಿತವಾಗಿ ತಿಳಿಸಲಾಗುವುದು ಎಂದು ನ.7ರಂದು ವಿಚಾರಣೆ ವೇಳೆ ಅಡ್ವಕೇಟ್ ಜನರಲ್ ಶಶಿಕಿರಣ ಶೆಟ್ಟಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಅದರಂತೆ ಇಂದು ಸರ್ಕಾರ ತನ್ನ ನಿರ್ಧಾರವನ್ನು ಕೋರ್ಟ್‌ಗೆ ತಿಳಿಸುವ ಸಾಧ್ಯತೆ ಇದೆ. ಹೈಕೋರ್ಟ್ನಲ್ಲಿ ಇಂದು ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಯಲಿದ್ದು, RSS ಸೇರಿ ಎಲ್ಲ 11 ಸಂಘಟನೆಗಳಿಗೆ ಯಾವ ದಿನ ಅವಕಾಶ ಕೊಡಲಿದೆ ಎಂಬ ಬಗ್ಗೆ ಕುತೂಹಲ ಮೂಡಿದೆ.
ಇದನ್ನೂ ಓದಿ : ಗೃಹ ಸಚಿವ ಪರಮೇಶ್ವರ್ ವಿರುದ್ಧ ಅವಹೇಳನಕಾರಿ ಹೇಳಿಕೆ – ಬಿಜೆಪಿ ಮುಖಂಡ ಸಂತೋಷ್ ಕೊಟ್ಯಾನ್ ಅರೆಸ್ಟ್!







