RCB ಫ್ರಾಂಚೈಸಿ ಖರೀದಿಗೆ ಮುಂದಾದ ಹೊಂಬಾಳೆ ಫಿಲಂಸ್? – ‘ವಿಜಯ’ಕ್ಕೆ ಇನ್ನೊಂದೇ ಮೆಟ್ಟಿಲು!

ಕಾಂತಾರ, ಕೆಜಿಎಫ್ ಸಿನಿಮಾದಂತಹ ಬಹುದೊಡ್ಡ ಸಿನಿಮಾಗಳನ್ನು ನೀಡಿದ ಹೊಂಬಾಳೆ ಫಿಲಂಸ್ ಈಗಾಗಗಲೇ ದೇಶಾದ್ಯಂತ ಚಿರಪರಿಚಿತ. ಇದೀಗ ಕನ್ನಡದ ಹೆಮ್ಮೆಯ ಹೊಂಬಾಳೆ ಸಂಸ್ಥೆ IPL ಇತಿಹಾಸದಲ್ಲೇ ಕ್ರೇಜಿಯೆಸ್ಟ್ ಹಾಗೂ ಹೈಯೆಸ್ಟ್ ಫ್ಯಾನ್ ಫಾಲೋಯಿಂಗ್ ಇರೋ RCB ಫ್ರಾಂಚೈಸ್‌‌ನ ಖರೀದಿಸೋಕೆ ಮುಂದಾಗಿದೆ ಎನ್ನಲಾಗಿದೆ.

ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಇರೋದು RCB ಫ್ರಾಂಚೈಸ್​ಗೆ. 17 ವರ್ಷಗಳಿಂದ ಕಪ್ ಗೆಲ್ಲದಿದ್ರೂ ಕೂಡ ನಮ್ಮ ಆರ್‌ಸಿಬಿ ಟೀಂಗೆ ಫ್ಯಾನ್ಸ್ ತುಂಬಾ ಲಾಯಲ್ ಹಾಗೂ ರಾಯಲ್ ಆಗಿ ಸಪೋರ್ಟ್ ಮಾಡಿದ್ರು. ಅದೇ ಕಾರಣದಿಂದ ಕಿಂಗ್ ಕೊಹ್ಲಿ ಟೀಂನ ಆರ್‌ಸಿಬಿ ಪ್ಲೇಯರ್ಸ್‌ ಕಳೆದ ಸೀಸನ್‌‌ನಲ್ಲಿ IPL ಕಪ್‌ ಗೆದ್ದಿದ್ದಾರೆ. ಮೊದಲ ಬಾರಿ IPL ಕಪ್‌ ಗೆದ್ದ ಖುಷಿಯನ್ನು ಕೋಟ್ಯಂತರ ಕನ್ನಡಿಗರು ಸಂಭ್ರಮಿಸಿದರು. ಅಷ್ಟೇ ಅಲ್ಲದೆ ಈ ‘ಸಲ ಕಪ್ ನಮ್ದೇ’ ಅನ್ನೋ ಶ್ಲೋಗನ್‌‌ನ ‘ಈ ಸಲ ಕಪ್ ನಮ್ದು’ ಅಂತ ಚೇಂಜ್ ಮಾಡಿದ್ರು.

ಇದೀಗ 2026ರ ಮಾರ್ಚ್‌ 31ರ ಒಳಗೆ RCB ತಂಡದ ಮಾಲೀಕತ್ವ ಬದಲಾಗಬೇಕಿದೆ. ವಿಜಯ್ ಮಲ್ಯ ಬಳಿಕ ಆರ್‌ಸಿಬಿ ಟೀಂ ಯುಎಸ್‌ಎಲ್ ಪಾಲಾಗಿತ್ತು. ಯುಬಿ ಗ್ರೂಪ್ಸ್‌‌‌ ಸಹ-ಮಾಲೀಕತ್ವದಿಂದ ಈಗ ಹೊರಬರ್ತಿದ್ದು, ಅದನ್ನ ಖರೀದಿಸಲು ಸಾಕಷ್ಟು ಮಂದಿ ಸರತಿ ಸಾಲಿನಲ್ಲಿ ಕ್ಯೂ ನಿಂತಿದ್ದಾರೆ. ಶಿವಮೊಗ್ಗ ಮೂಲದ ಯುವ ಉದ್ಯಮಿ ನಿಖಿಲ್ ಕಾಮತ್ ಹಾಗೂ ಮಣಿಪಾಲ್ ಗ್ರೂಪ್ಸ್‌‌ನ ರಂಜನ್ ರೈ ಹೆಸರುಗಳು ದಟ್ಟವಾಗಿ ಕೇಳಿಬರ್ತಿವೆ. ಇಂಟರೆಸ್ಟಿಂಗ್ ಅಂದ್ರೆ ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಹೆಸರು ಕೂಡ ಕೇಳಿಬರ್ತಿದೆ.

 

ಹೊಂಬಾಳೆ ಫಿಲಂಸ್ ಕನ್ನಡದ ಜೊತೆ ಭಾರತದ ಪ್ರಮುಖ ಐದು ಭಾಷೆಗಳಲ್ಲಿ ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ಬಹುಭಾಷಾ ಸಿನಿಮಾಗಳನ್ನ ಮಾಡ್ತಿದೆ. ಸದ್ಯ ಹೃತಿಕ್ ರೋಷನ್ ಜೊತೆ ಬಾಲಿವುಡ್‌ ಅಂಗಳದಲ್ಲಿ ಸಾವಿರಾರು ಕೋಟಿ ಬಜೆಟ್‌‌ನಲ್ಲಿ ಚಿತ್ರ ನಿರ್ಮಾಣಕ್ಕೆ ಹೊಂಬಾಳೆ ಮುಂದಾಗಿದೆ. ಅಂತಹ ಹೊಂಬಾಳೆ ನಮ್ಮ ಹೆಮ್ಮೆಯ ಆರ್‌ಸಿಬಿ ಟೀಂನ ಖರೀದಿಸೋದು ಖುಷಿಯ ಸಂಗತಿ.

ವಿಜಯ್ ಕಿರಗಂದೂರು ಹಾಗೂ ಚೆಲುವೆ ಗೌಡರು ಕಟ್ಟಿದ ಹೊಂಬಾಳೆ ಸಂಸ್ಥೆ ಸಿನಿಮಾ ಹಾಗೂ ಕನ್‌‌ಸ್ಟ್ರಕ್ಷನ್ ಫೀಲ್ಡ್‌‌ನಲ್ಲಿ ಬಹುದೊಡ್ಡ ಹೆಸರು ಮಾಡಿದೆ. ಜೊತೆಗೆ ಆ ಹೆಸರಿಗೆ ತಕ್ಕನಾಗಿ ಸಾವಿರಾರು ಕೋಟಿ ಹಣ ಕೂಡ ಮಾಡಿದೆ. ಹಾಗಾಗಿ ಹೊಂಬಾಳೆ ಬರೀ ಹೆಸರಲ್ಲ. ಅದೊಂದು ಬ್ರ್ಯಾಂಡ್. ಹೀಗಾಗಿ ಆರ್‌ಸಿಬಿ ಫ್ರಾಂಚೈಸ್‌ ಹೊಂಬಾಳೆ ಪಾಲಾಗುತ್ತೆ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈಗಾಗಲೇ ಕೆಜಿಎಫ್, ಕಾಂತಾರ ಚಿತ್ರಗಳ ಸಮಯದಲ್ಲಿ ಅಫಿಶಿಯಲ್ ಆಗಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಟೀಂ ಜೊತೆ ಹೊಂಬಾಳೆ ಟೈಯಪ್ ಆಗಿತ್ತು. ವಿಜಯ್ ಕಿರಗಂದೂರು ಅವರು ಇಡೀ ಆರ್‌ಸಿಬಿ ಟೀಂಗೆ ಕೆಜಿಎಫ್ ಹಾಗೂ ಕಾಂತಾರ ಸಿನಿಮಾಗಳನ್ನ ತೋರಿಸಿದ್ರು. ಹೊಂಬಾಳೆ ಫಿಲಂಸ್ RCBಗಾಗಿ ಇದು ಹೊಸ ಅಧ್ಯಾಯ ಅಂತ ರಿಷಬ್ ಶೆಟ್ಟಿ ಜೊತೆ ಕಾಂತಾರ ವೇಳೆ ವಿಶೇಷವಾದ ಪ್ರೋಮೋ ಶೂಟ್ ಕೂಡ ಮಾಡಿಸಿತ್ತು. ಹಾಗಾಗಿ ಹೊಂಬಾಳೆ ಗ್ರೂಪ್ ಆರ್‌ಸಿಬಿಯನ್ನ ಖರೀದಿ ಮಾಡುತ್ತೆ ಎನ್ನಲಾಗುತ್ತಿದೆ. ಆದ್ರೆ RCB ಮಾಲೀಕತ್ವ ಹೊಂಬಾಳೆ ಪಾಲಾಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ಇದನ್ನೂ ಓದಿ : ಸೊಸೆಗೆ ಲೈಂಗಿಕ ಕಿರುಕುಳ – ತಂದೆಯನ್ನು ಕೊಲೆ ಮಾಡಿದ ಮಗ!

Btv Kannada
Author: Btv Kannada

Read More