ಸೊಸೆಗೆ ಲೈಂಗಿಕ ಕಿರುಕುಳ – ತಂದೆಯನ್ನು ಕೊಲೆ ಮಾಡಿದ ಮಗ!

ವಿಜಯನಗರ : ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದಲ್ಲಿ ಅಪ್ಪ-ಮಗನ ನಡುವಿನ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಸೊಸೆ ಸ್ನಾನ ಮಾಡುವಾಗ ಕದ್ದು ನೋಡುತ್ತಿದ್ದ ಮತ್ತು ಪತ್ನಿಗೂ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ತಂದೆ 60 ವರ್ಷದ ಶಿವಲಿಂಗಪ್ಪ ಅವರನ್ನು ಪುತ್ರ ಶಂಕ್ರಪ್ಪ ಒಣಕೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಶಂಕ್ರಪ್ಪ
                        ಶಂಕ್ರಪ್ಪ

ಮನೆಯ ಹಿರಿಯ ಶಿವಲಿಂಗಪ್ಪ ಅವರು ತನ್ನ ಸೊಸೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಮಗ ಶಂಕ್ರಪ್ಪ ತಂದೆಗೆ ಎಚ್ಚರಿಕೆ ನೀಡಿದ್ದರೂ ಚಾಳಿ ಮುಂದುವರೆಸಿದ್ದರು. ಇದೇ ವಿಚಾರವಾಗಿ ಮಂಗಳವಾರ ಇಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿ, ತಳ್ಳಾಟ-ನೂಕಾಟ ನಡೆಯಿತು. ಈ ವೇಳೆ ಆಕ್ರೋಶಗೊಂಡ ಶಂಕ್ರಪ್ಪ, ಅಲ್ಲೇ ಇದ್ದ ಒಣಕೆಯಿಂದ ತಂದೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಶಿವಲಿಂಗಪ್ಪ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.

ಕೊಲೆ ಆರೋಪಿ ಶಂಕ್ರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಧರ್ಮಸ್ಥಳ ಪ್ರಕರಣ – ಎಸ್ಐಟಿ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್!

Btv Kannada
Author: Btv Kannada

Read More