ಧರ್ಮಸ್ಥಳ ಗ್ರಾಮದಲ್ಲಿ ಶವಗಳ ಹೂತಿಟ್ಟ ಕೇಸ್ – ಪ್ರಕರಣ ರದ್ದು ಕೋರಿ ಹೈಕೋರ್ಟ್​ಗೆ ಗಿರೀಶ್ ಮಟ್ಟಣ್ಣ​​ನವರ್ ಅರ್ಜಿ!

ಬೆಂಗಳೂರು : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಇದೀಗ ಈ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣ​​ನವರ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಅಕ್ಟೋಬರ್ 30 ರಂದು ಪ್ರಕರಣದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆಯು ನವೆಂಬರ್ 12ರವರೆಗೆ ಜಾರಿಯಲ್ಲಿತ್ತು. ತಡೆಯಾಜ್ಞೆ ಅಂತಿಮವಾದ ಹಿನ್ನೆಲೆ ಹೈಕೋರ್ಟ್ ಇಂದು ಮತ್ತೆ ಅರ್ಜಿ ವಿಚಾರಣೆ ನಡೆಸಲಿದೆ.

ನ್ಯಾಯಮೂರ್ತಿ ಮಹಮ್ಮದ್ ನವಾಜ್ ಪೀಠದಲ್ಲಿ ಇಂದು ವಿಚಾರಣೆ ನಡೆಯಲಿದೆ. ಅರ್ಜಿದಾರ ಗಿರೀಶ್ ಮಟ್ಟನ್‌ನವರ್ ಪರವಾಗಿ ಹಿರಿಯ ವಕೀಲ ಬಾಲನ್ ಅವರು ವಾದ ಮಂಡಿಸಲಿದ್ದಾರೆ. ಸರ್ಕಾರದ ಪರವಾಗಿ SPP ಬಿ.ಎನ್. ಜಗದೀಶ್ ಅವರು ವಾದ ಮಂಡಿಸಲಿದ್ದಾರೆ.

ಇದನ್ನೂ ಓದಿ : ಆನೇಕಲ್​ನಲ್ಲಿ ರೇಡಿಯಾಲಜಿಸ್ಟ್ ಕಾಮಕಾಂಡ ಕೇಸ್​ -ಆರೋಪಿ ಕೈಗೆ ಸಿಕ್ತಿದ್ದಂತೆಯೇ ರಿಲೀಸ್ ಮಾಡಿದ ಪೊಲೀಸ್​.. ‘ಖಾಕಿ’ ನಡೆಗೆ ಸ್ಥಳೀಯರ ಆಕ್ರೋಶ!

Btv Kannada
Author: Btv Kannada

Read More