ಬೆಂಗಳೂರು : ಆನೇಕಲ್ನಲ್ಲಿ ನಡೆದ ರೇಡಿಯಾಲಜಿಸ್ಟ್ ಡಾ. ಜಯಕುಮಾರ್ ಕಾಮಕಾಂಡ ಕೇಸ್ ಇದೀಗ ಹೊಸ ಟ್ವಿಸ್ಟ್ ಪಡೆದಿದೆ. ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್ ಆರೋಪಿ ಡಾ. ಜಯಕುಮಾರ್ನನ್ನು ಅರೆಸ್ಟ್ ಮಾಡುವ ಬದಲು ಬಿಟ್ಟು ಕಳುಹಿಸಿದ್ದಾರೆ. ಪೊಲೀಸರ ಈ ನಡೆಗೆ ಜನರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ರೇಡಿಯಾಲಜಿಸ್ಟ್ ಡಾ. ಜಯಕುಮಾರ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ಹಿನ್ನೆಲೆ ಮಹಿಳೆ ದೂರು ನೀಡಿದ್ದು, ಆನೇಕಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದರೂ, ಆರೋಪಿಯನ್ನು ಕೈಗೆ ಸಿಕ್ಕಿದ್ದಂತೆಯೇ ರಿಲೀಸ್ ಮಾಡಿರುವುದು ಮತ್ತಷ್ಟು ವಿವಾದಾತ್ಮಕ್ಕೆ ಕಾರಣವಾಗಿದೆ.
ನೊಂದ ಮಹಿಳೆ ಮತ್ತು ಕೆಲವು ಗ್ರಾಮಸ್ಥರು ಡಾ. ಜಯಕುಮಾರ್ ಅವರನ್ನು ನೇರವಾಗಿ ಠಾಣೆಗೆ ಕರೆತಂದಿದ್ದಾರೆ. ಆರೋಪಿಯ ವಿರುದ್ಧ ಮಹಿಳೆ ನೀಡಿದ ದೂರಿನಲ್ಲಿ ವೈದ್ಯನಿಂದ ಅಸಭ್ಯ ವರ್ತನೆ ಮತ್ತು ಮಾನಸಿಕ ಕಿರುಕುಳದ ಆರೋಪವಿತ್ತು. ಆದರೆ ಕೆಲವೇ ಹೊತ್ತಿನಲ್ಲೇ ಇನ್ಸ್‌ಪೆಕ್ಟರ್ ತಿಪ್ಪೇಸ್ವಾಮಿ ಆರೋಪಿಯನ್ನು ಠಾಣೆಯಿಂದ ಹೊರಗೆ ಬಿಟ್ಟು ಕಳುಹಿಸಿದ್ದಾರೆಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ.
ಜಯಕುಮಾರ್ ಅವರನ್ನು ಠಾಣೆಯಿಂದ ಬಿಡುತ್ತಿದ್ದಂತೆಯೇ ಅವರು ಇನ್ನೋವಾ ಕಾರಿನಲ್ಲಿ ಪರಾರಿ ಆಗಿದ್ದಾರೆ. ಇದರಿಂದ ಸ್ಥಳೀಯರು ಠಾಣೆಯ ಮುಂದೆ ಗುಂಪುಗೂಡಿ ತೀವ್ರ ಪ್ರತಿಭಟನೆ ನಡೆಸಿದರು. ಪೊಲೀಸ್ ಠಾಣೆಯಲ್ಲೇ ನ್ಯಾಯ ಕಳೆದುಹೋದಂತಾಗಿದೆ ಎಂಬ ಅಭಿಪ್ರಾಯಗಳು ಹರಿದಾಡುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪೊಲೀಸ್ರ ನಡೆ ಕಂಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಡಾ.ಜಯಕುಮಾರ್ ಪೊಲೀಸ್ರಿಗೆ ಏನಾದರೂ ಆಮಿಷ್ ಒಡ್ಡಿದ್ದಾನಾ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ಹಾಗೂ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಎಫ್‌ಐಆರ್ ದಾಖಲಾಗಿದ್ದರೂ ಬಿಟ್ಟು ಕಳುಹಿಸುವುದು ಕಾನೂನು ಉಲ್ಲಂಘನೆ. ಇದು ಕೇವಲ ಪೊಲೀಸ್ ನಿರ್ಲಕ್ಷ್ಯವಲ್ಲ, ಪೀಡಿತೆಯ ಮೇಲಿನ ಅವಮಾನವೂ ಆಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಟ್ರ್ಯಾಕ್ಟರ್ ಹೆಸರಿನಲ್ಲಿ ರೈತರಿಗೆ ವಂಚನೆ – ಆರೋಪಿ ಅರೆಸ್ಟ್, 10 ಟ್ರ್ಯಾಕ್ಟರ್ ವಶಕ್ಕೆ!







