ಬೆಂಗಳೂರಿನಲ್ಲಿ ಇಬ್ಬರು ಯುವತಿಯರ ರಿಲೇಷನ್ ಶಿಪ್​ನಲ್ಲಿದ್ದ ಯುವಕ ಆತ್ಮಹತ್ಯೆ!

ಬೆಂಗಳೂರು : ಇಬ್ಬರು ಯುವತಿಯರ ಜೊತೆಗಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಳಿಮಾವು ಠಾಣೆ ವ್ಯಾಪ್ತಿಯ ಯಲ್ಲೇನಹಳ್ಳಿಯಲ್ಲಿ ನಡೆದಿದೆ. ವಿಷ್ಣು(39) ಆತ್ಮಹತ್ಯೆಗೆ ಶರಣಾದ ಯುವಕ.

ನ.7 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯಲ್ಲೇನಹಳ್ಳಿಯ ರೆಡಿಯೆಂಟ್ ಶೈನ್ ಅಪಾರ್ಟ್ಮೆಂಟ್​ನಲ್ಲಿ ಸೂರ್ಯಕುಮಾರಿ ಹಾಗೂ ಜ್ಯೋತಿ ಎಂಬ ಯುವತಿಯರ ಜೊತೆ ವಿಷ್ಣು ವಾಸವಿದ್ದ. ಯುವಕ ಜ್ಯೋತಿ ಜೊತೆ ರಿಲೇಷನ್ ಶಿಪ್​ನಲ್ಲಿದ್ದ, ಜ್ಯೋತಿಗೂ ಮುಂಚೆ ಸೂರ್ಯಕುಮಾರಿ ಜೊತೆ ವಿಷ್ಣು ರಿಲೇಷನ್ ಶಿಪ್​ನಲ್ಲಿದ್ದ. ಈ ವಿಚಾರಕ್ಕೆ ಮೂವರ ಮಧ್ಯೆಯೂ ಗಲಾಟೆ ಶುರುವಾಗಿದ್ದು, ಇದರಿಂದ ಬೇಸತ್ತು ವಿಷ್ಣು ಫ್ಲಾಟ್​ನ ಬಾತ್ ರೂಮ್​ನಲ್ಲಿ ನೇಣಿಗೆ ಶರಣಾಗಿದ್ದಾನೆ.

ವಿಷ್ಣು ಹೊಸೂರು ರಸ್ತೆಯ ಎಕೆಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮೃತನ ಸಹೋದರನಾದ ಜಿಷ್ಣು ಎಂಬುವವರು ಈ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹುಳಿಮಾವು ಪೊಲೀಸರು ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ : ಬಳ್ಳಾರಿ SP ಖಡಕ್ IPS ಅಧಿಕಾರಿ ಶೋಭಾರಾಣಿಯವರ ಈ ಕೆಲಸಕ್ಕೆ ಇಡೀ ರಾಜ್ಯದ ಪೊಲೀಸರು ಶ್ಲಾಘಿಸಿದ್ದಾರೆ!

Btv Kannada
Author: Btv Kannada

Read More