ಬೆಂಗಳೂರು : ಬದಲಿ ನಿವೇಶನ ಕೋರಿರುವ ಅರ್ಜಿದಾರರಿಗೆ ಒಂದೇ ದಿನದಲ್ಲಿ ವಿವಿಧ ಅಳತೆಯ ಒಟ್ಟು 784 ನಿವೇಶನಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬದಲಿಯಾಗಿ ಹಂಚಿಕೆ ಮಾಡಿದೆ. ಈ ಮೂಲಕ ಬಿಡಿಎ ಇತಿಹಾಸ ನಿರ್ಮಿಸಿದೆ.

ಪ್ರಾಧಿಕಾರದ ಅಧ್ಯಕ್ಷ ಎನ್.ಎ. ಹ್ಯಾರಿಸ್, ಅರ್ಕಾವತಿ ಬಡಾವಣೆಯ ನಿವೇಶನ ಹಂಚಿಕೆದಾರರಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ರ್ಯಾಡಂಮೈಜೇಷನ್ ತಂತ್ರಾಂಶದ ಮೂಲಕ ಸೋಮವಾರ ಹಂಚಿಕೆ ಮಾಡಿದರು.
ಯಾರಿಗೆ ಯಾವ ನಿವೇಶನ?
20*30 ಅಳತೆ 113 ನಿವೇಶಗಳನ್ನು ಆರ್ಥಿಕ ದುರ್ಬಲ ವರ್ಗದವರಿಗೆ, 11 ನಿವೇಶನಗಳನ್ನು ಸಾಮಾನ್ಯ ವರ್ಗದವರಿಗೆ ಹಂಚಿಕೆ ಮಾಡಿದರು. ಉಳಿದಂತೆ 513 ಮಂದಿಗೆ 30*40 ಅಳತೆಯ, 74 ಮಂದಿಗೆ 40*60 ಅಳತೆಯ, 44 ಮಂದಿಗೆ 50*80 ಅಳತೆಯ ಹಾಗೂ ಸುರಭಿ ಸೇವಾ ಸಂಘ (ರೆವಿನ್ಯೂ ಸೈಟ್ ಹೋಲ್ಡರ್ಸ್)ಕ್ಕೆ 29 ಸೇರಿದಂತೆ ಒಟ್ಟು 784 ನಿವೇಶನಗಳನ್ನು ಬದಲಿಯಾಗಿ ಹಂಚಿಕೆ ಮಾಡಿದರು.
- 20×30 (ಆರ್ಥಿಕ ದುರ್ಬಲ ವರ್ಗ) – 113
- 20×30 (ಸಾಮಾನ್ಯ ವರ್ಗ) -11
- 30×40 -513
- 40×60 -74
- 50×80 – 44
- ಸುರಭಿ ಸೇವಾ ಸಂಘ -29
- ಒಟ್ಟು – 784
ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಾಗಿ ಸ್ವಾಧೀನ ಪಡೆಯದ ಹಂಚಿಕೆದಾರರಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನವನ್ನು ಹಂಚಿಕೆ ಮಾಡಲಾಯಿತು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಸಭೆಯಲ್ಲಿ ಬಿಡಿಎ ಆಯುಕ್ತ ಮೇಜರ್ ಮಣಿವಣ್ಣನ್, ಕಾರ್ಯದರ್ಶಿ ಸಿ.ಎಲ್ ಶಿವಕುಮಾರ್, ಹೆಚ್ಚುವರಿ ಕಾರ್ಯದರ್ಶಿ ಎನ್.ಮಂಜುನಾಥ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಟಾಕಿಂಗ್ ಸ್ಟಾರ್ ಅಭಿನಯದ “GST” ಟ್ರೇಲರ್ ಗೆ ಆಕ್ಷನ್ ಕಟ್ ಹೇಳಿದ ರಿಯಲ್ ಸ್ಟಾರ್ ಉಪ್ಪಿ!







