ರಾಜ್ಯದ ಜನರಿಗೆ ಮತ್ತೊಂದು ಶಾಕ್ – ಶೀಘ್ರ ಖಾಸಗಿ ಬಸ್‌ ಟಿಕೆಟ್‌ ದರವೂ ಹೆಚ್ಚಳ!

ಬೆಂಗಳೂರು : ಸಾಲು, ಸಾಲು ಬೆಲೆ ಏರಿಕೆಗೆ ತುತ್ತಾಗಿರುವ ರಾಜ್ಯದ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಸರ್ಕಾರಿ ಬಸ್‌ನಂತೆ ಖಾಸಗಿ ಬಸ್ ದರ ಶೇಕಡಾ 15ರಷ್ಟು ಏರಿಕೆ ಮಾಡಲು ತೀರ್ಮಾನ ಮಾಡಲಾಗಿದೆ. ರಾಜ್ಯದಲ್ಲಿ ಶೇ.15ರಷ್ಟು ಟಿಕೆಟ್‌ ದರ ಏರಿಕೆ ಮಾಡಲು ಖಾಸಗಿ ಬಸ್ ಮಾಲೀಕರ ಒಕ್ಕೂಟ ನಿರ್ಧರಿಸಿದ್ದು, ಈ ಬಗ್ಗೆ ಮುಂದಿನ ವಾರವೇ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ.

ಹಾಲು, ಕರೆಂಟು, ಮೆಟ್ರೋ, ಸರ್ಕಾರಿ ಬಸ್ ಟಿಕೆಟದ ದರ ಹೀಗೆ ಎಲ್ಲವೂ ಏರಿಕೆಯಾಗಿದ್ದು, ಈ ಬಗ್ಗೆ ಜನ ಬೀದಿಗಿಳಿದು ಹೋರಾಡುತ್ತಿರುವಾಗಲೇ, ಸದ್ದಿಲ್ಲದೆ ಖಾಸಗಿ ಬಸ್ ಮಾಲೀಕರು ಟಿಕೆಟ್ ದರ ಏರಿಸಲು ನಿರ್ಧರಿಸಿದ್ದಾರೆ. ಡೀಸೆಲ್ ದರ ಏರಿಕೆ ಹಾಗೂ ಟೋಲ್ ದರ ಹೆಚ್ಚಳ ಹಿನ್ನೆಲೆಯಲ್ಲಿ, ಸರ್ಕಾರದ ತೀರ್ಮಾನಕ್ಕೆ ಕಾಯದೆ ತಾವೇ ದರ ಏರಿಸಲು ನಿರ್ಧರಿಸಿದ್ದಾರೆ. ಹಾಗೆಯೇ ಪ್ರತಿ ಟಿಕೆಟಿಗೆ ಒಂದು ರೂಪಾಯಿ, ಎರಡು ರುಪಾಯಿ ಅಥವಾ ರೂ.3 ಏರಿಕೆ ಮಾಡುವ ಸಾಧ್ಯತೆಯಿದೆ.

ಇತ್ತೀಚಿನ ವರ್ಷಗಳಲ್ಲಿ ಪ್ರತಿ ಲೀಟರ್ ಡೀಸೆಲ್​ ದರ ಸುಮಾರು ಐದು ರೂಪಾಯಿ ಏರಿಕೆಯಾಗಿದೆ. ಟೋಲ್ ದರ ಕೂಡ ಹೆಚ್ಚಾಗಿದೆ. ಇದೀಗ ದರ ಏರಿಸದಿದ್ದರೆ ಖಾಸಗಿ ಬಸ್ ಉದ್ಯಮ ಸ್ಥಗಿತಗೊಳ್ಳುತ್ತದೆ. ಪ್ರತಿ ಬಸ್​ ನಿರ್ವಹಣೆಗೆ ಸದ್ಯ 18ರಿಂದ 20 ಸಾವಿರ ರೂಪಾಯಿ ಹೆಚ್ಚುವರಿ ಖರ್ಚು ಬರುತ್ತಿದೆ. ಹಾಗಾಗಿ ದರ ಏರಿಸುವುದು ಅನಿವಾರ್ಯ ಎಂದು ಬಸ್ ಮಾಲೀಕರ ಸಂಘದ ರಾಜ್ಯ ಪ್ರಮುಖರು ಹೇಳಿದ್ದಾರೆ.

ಖಾಸಗಿ ಬಸ್ ದರ ಎಷ್ಟಿತ್ತು? ಎಷ್ಟಾಗುತ್ತೆ?

ಬೆಂಗಳೂರು TO ಹುಬ್ಬಳ್ಳಿ
ಈಗಿನ ದರ ₹1000-₹1100
ಪರಿಷ್ಕೃತ ದರ ₹1200-₹1300
ವೀಕೆಂಡ್‌ನಲ್ಲಿ ₹1500

ಬೆಂಗಳೂರು TO ಬೆಳಗಾವಿ
ಈಗಿನ ದರ: ₹1200
ಪರಿಷ್ಕೃತ ದರ:₹1400
ವೀಕೆಂಡ್‌ನಲ್ಲಿ ₹1500 – ₹1600

ಬೆಂಗಳೂರು TO ಕಲಬುರಗಿ
ಈಗಿನ ದರ ₹1300
ಪರಿಷ್ಕೃತ ದರ :₹1500
ವೀಕೆಂಡ್‌ನಲ್ಲಿ ₹1500-₹1700

ಬೆಂಗಳೂರು TO ಮಂಗಳೂರು
ಈಗಿನ ದರ ₹900 – ₹1100
ಪರಿಷ್ಕೃತ ದರ ₹1200 – ₹1500
ವೀಕೆಂಡ್‌ನಲ್ಲಿ ₹1500 -₹1800

ಬೆಂಗಳೂರು TO ಬಳ್ಳಾರಿ
ಈಗಿನ ದರ: ₹700 – ₹800
ಪರಿಷ್ಕೃತ ದರ: ₹900 – ₹1000
ವೀಕೆಂಡ್‌ನಲ್ಲಿ: ₹1200

ಬೆಂಗಳೂರು TO ಶಿವಮೊಗ್ಗ
ಈಗಿನ ದರ: ₹750
ಪರಿಷ್ಕೃತ ದರ: ₹1000
ವೀಕೆಂಡ್‌ನಲ್ಲಿ: ₹1200

ಇದನ್ನೂ ಓದಿ : ಹಾವೇರಿಯಲ್ಲಿ ಸಾಲದ ಬಾಧೆಯಿಂದ ಬೇಸತ್ತು ದಂಪತಿ ಆತ್ಮಹತ್ಯೆ!

Btv Kannada
Author: Btv Kannada

Read More

Read More