ಅಮೋಘಸಿದ್ದ ದೇವಸ್ಥಾನದ ಪೂಜಾರಿ ಭೀಕರ ಹತ್ಯೆ – ದುಷ್ಕರ್ಮಿಗಳ ಪತ್ತೆಗೆ ಪೊಲೀಸರ ಬಲೆ!

ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಅರಕೇರಿ ಬಳಿಯ ಪ್ರಸಿದ್ಧ ಅಮೋಘಸಿದ್ದ ದೇವಸ್ಥಾನದ ಪೂಜಾರಿಯಾಗಿದ್ದ ಅಮಸಿದ್ದ ಬಿರಾದಾರ ಅವರನ್ನು, ದುಷ್ಕರ್ಮಿಗಳು ತಲೆಗೆ ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಈ ಭೀಕರ ಘಟನೆ ದೇವಸ್ಥಾನದ ಸಮೀಪವೇ ಸಂಭವಿಸಿದ್ದು, ದುಷ್ಕರ್ಮಿಗಳು ಅಮಸಿದ್ದ ಬಿರಾದಾರ ಅವರ ತಲೆಗೆ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ದುಷ್ಕರ್ಮಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ : ನಾಯಂಡಹಳ್ಳಿ ಫ್ಲೈ ಓವರ್‌ನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ!

Btv Kannada
Author: Btv Kannada

Read More