ಬೆಂಗಳೂರು : ಫ್ಲೈ ಓವರ್‌ನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ನಾಯಂಡಹಳ್ಳಿಯಲ್ಲಿ ನಡೆದಿದೆ. ಫ್ಲೈ ಓವರ್‌ನಿಂದ ಬೀಳ್ತಿದ್ದಂತೆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮೃತ ವ್ಯಕ್ತಿಯು ಬೈಕ್‌ನಲ್ಲಿ ಫ್ಲೈ ಓವರ್ ಬಳಿಗೆ ಬಂದಿದ್ದು, ಬೈಕ್ ಅನ್ನು ನಿಲ್ಲಿಸಿ ಏಕಾಏಕಿ ಮೇಲಿನಿಂದ ಜಿಗಿದಿದ್ದಾರೆ. ಎತ್ತರದಿಂದ ಕೆಳಗೆ ಬಿದ್ದ ತಕ್ಷಣವೇ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ವ್ಯಕ್ತಿಯು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ : ಪತಿಯನ್ನು ಕೊಂದು ಆತ್ಮಹತ್ಯೆ ನಾಟಕವಾಡಿದ ಪತ್ನಿ ಲಾಕ್!
Author: Btv Kannada
Post Views: 354







