ಕೈದಿಗಳಿಗೆ ರಾಜಾತಿಥ್ಯ ಕೇಸಲ್ಲಿ ನಟ ಧನ್ವೀರ್​ಗೆ ವಿಚಾರಣೆ ಬಿಸಿ!

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯದ ನೀಡಿರುವ ವಿಡಿಯೋಗಳು ವೈರಲ್​ ಆಗಿದ್ದು, ಇದೀಗ ಈ ಕೇಸ್​ನಲ್ಲಿ ನಟ ಧನ್ವೀರ್​ಗೆ ವಿಚಾರಣೆ ಬಿಸಿ ತಟ್ಟಿದೆ. ಬೆಳಗ್ಗಿನ ಜಾವ 3 ಗಂಟೆಗೆ ಏರ್​​ಪೋರ್ಟ್​ನಲ್ಲಿ ಧನ್ವೀರ್ ಅವರನ್ನು​ CCB ವಶಕ್ಕೆ ಪಡೆದಿದೆ.

ಕೈದಿಗಳ ರಾಜಾತಿಥ್ಯ ದೃಶ್ಯಗಳನ್ನು ಹರಿಬಿಟ್ಟ ವಿಚಾರವಾಗಿ ಶಾಂತಿನಗರದ ​ CCB ಕಚೇರಿಯಲ್ಲಿ ನಟ ಧನ್ವೀರ್ ತೀವ್ರ ವಿಚಾರಣೆ ನಡೆಸಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ವಿಡಿಯೋ ನಿಮಗೆ ಕಳಿಸಿದ್ದು ಯಾರು? ಕೈದಿಗಳ ರಾಜಾತಿಥ್ಯ ವಿಡಿಯೋವನ್ನು ನೀವು ಯಾರು, ಯಾರಿಗೆ ಕಳಿಸಿದ್ದೀರಾ? ಯಾವ ಯಾವ ಮಾಧ್ಯಮಗಳಿಗೆ ಕಳಿಸಿದ್ದೀರಿ? ರಾಜಾತಿಥ್ಯ ವಿಡಿಯೋದಲ್ಲಿ ಇರುವವರು ಯಾರ್ಯಾರು ಗೊತ್ತಾ? ಎಂದು ಧನ್ವೀರ್ ಬಳಿ ಸಿಸಿಬಿ ಪೊಲೀಸರು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.

ಧನ್ವೀರ್​ ವಶಕ್ಕೆ ಪಡೆದು ಪೊಲೀಸರು ಸಿಡಿಆರ್​ ಪಡೆದುಕೊಂಡಿದ್ದು, ಸಿಸಿಬಿ ಪೊಲೀಸರು ಧನ್ವೀರ್​ ಮೊಬೈಲ್​ನ್ನು​ ಡಾಟಾ ರಿಟ್ರೀವ್​ಗೆ ಕಳಿಸಿದ್ದಾರೆ. ವಿಚಾರಣೆ ಬಳಿಕ ಪೊಲೀಸರು ಧನ್ವೀರ್ ಅವರನ್ನು ಕಳುಹಿಸಿಕೊಟ್ಟಿದ್ದಾರೆ. ಮತ್ತೆ ಕರೆದಾಗ ಮುಂದಿನ ವಿಚಾರಣೆಗೆ ಬರುವಂತೆ ಧನ್ವೀರ್​ಗೆ ಸೂಚನೆ ನೀಡಿದ್ದಾರೆ. ಧನ್ವೀರ್ ಮಾಧ್ಯಮಗಳ ಕಣ್ಣು ತಪ್ಪಿಸಿ ಹಿಂಬದಿ ಗೇಟ್ ಮೂಲಕ ಹೊರಟಿದ್ದಾರೆ.

ಇದನ್ನೂ ಓದಿ : ಎಣ್ಣೆ ಪಾರ್ಟಿ ಬಳಿಕ ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಗ್ಯಾಂಗ್ – ಮಾರಾಮಾರಿ ವಿಡಿಯೋ ವೈರಲ್!

Btv Kannada
Author: Btv Kannada

Read More