ಬೆಂಗಳೂರು : ಪರಪ್ಪನ ಅಗ್ರಹಾರ ಖೈದಿಗಳಿಗೆ ನಿಯಮ ಮೀರಿ ರಾಜಾತಿಥ್ಯ ನೀಡಿರುವ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಿತಿ ರಚಿಸಲು ಮುಂದಾಗಿದೆ. ಇದೀಗ ಈ ಬಗ್ಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಜೈಲುಗಳಲ್ಲಿ ಅನೇಕ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿವೆ. ಇದಾಗಲೇ ಅದರ ಬಗ್ಗೆ ವರದಿ ಕೂಡ ಆಗಿದೆ, ಇದನ್ನ ನಾವು ಬಹಳ ಗಂಭೀರವಾಗಿ ಪರಿಣಗಣಿಸಿದ್ದೇವೆ ಎಂದಿದ್ದಾರೆ.
ಈ ಬಗ್ಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಬೆಂಗಳೂರಿನಲ್ಲಿ ಮಾತನಾಡಿ, ಯಾರು ಸಂಬಂಧಿಸಿದ ಅಧಿಕಾರಿಗಳಿದ್ದಾರೆ ಅವರದ್ದೇ ಜವಾಬ್ದಾರಿ. ಫೋನ್, ಗಾಂಜಾ ಲಿಕ್ಕರ್ ಜೈಲಿನ ಒಳಗಡೆ ಹೋಗುತ್ತೆ ಅಂದರೆ. ಅದಕ್ಕೆ ಹೊಣೆಗಾರರು ಯಾರು ಅಧಿಕಾರಗಳೇ ಅಲ್ವಾ? ಅದಕ್ಕೆ ನಾನು ಇವತ್ತು ಸಭೆ ಕರೆದಿದ್ದೇನೆ, ಎಲ್ಲವನ್ನ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಸಿಎಂ ಕೂಡ ಹೇಳಿದ್ದಾರೆ ಮುಲಾಜಿಲ್ಲದೇ ಕ್ರಮ ತಗೊಳ್ಳಿ ಅಂತಾ, ಹಿಂದೆ ಈ ರೀತಿ ಪ್ರಕರಣ ಆಗುತ್ತಿದ್ದರೆ ಡಿಜಿ ಎಡಿಐಜಿ ಅವರನ್ನ ಕರೆದು ಮಾತನಾಡುತ್ತಿದೆ. ಈಗ ಪ್ರಕರಣ ಗಂಭೀರ ಆಗಿದೆ ಅದಕ್ಕೆ ಎಲ್ಲ ಅಧಿಕಾರಿಗಳನ್ನು ಸಭೆಗೆ ಕರೆದಿದ್ದೇನೆ, ಹಿಂದೆಯೂ ಕೂಡ ಈ ರೀತಿ ಆದಾಗ. ಕ್ರಮ ತಗೊಂಡಿದ್ದೇವೆ ಇಲ್ಲ ಅಂತಲ್ಲ. ಸರಿಯಾಗಿ ಆಡಳಿತ ಮಾಡಿಲ್ಲ ಅಂದ್ರೆ ಖಂಡಿತ ಮುಲಾಜಿಲ್ಲದೆ ಕ್ರಮ ತಗೊಳ್ತೇವೆ, ಎರಡು ದಿನದ ಹಿಂದೆ ಸಂಬಂಧಿಸಿದ ಅಧಿಕಾರಿಗಳು ವರದಿ ನೀಡಿದ್ದಾರೆ. ಅದು ನಂಗೆ ಸಮಾಧಾನ ತಂದಿಲ್ಲ ಅದಕ್ಕೆ ಇವತ್ತು ಸಭೆ ಕರೆದಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಬಾಗಲಕೋಟೆಯಲ್ಲಿ ಮುಂದುವರೆದ ರೈತರ ಪ್ರತಿಭಟನೆ ವಿಚಾರ ಸಂಬಂಧ ಡಾ ಜಿ ಪರಮೇಶ್ವರ್ ಮಾತನಾಡಿ, ಒಂದು ವರ್ಗ 3500 ಕೊಡಲೇಬೇಕು ಅಂತಿದ್ದಾರೆ. ಇಡೀ ರೈತ ಸಮುದಾಯ ಕೂಡ ಒಪಿದ್ದಾರೆ, ಕೆಲವರು ಮಾತ್ರ ಒಪ್ಪುತ್ತಿಲ್ಲ. ಎಲ್ಲರೂ ಒಪ್ಪಿಕೊಂಡಾಗ ಅವರು ಒಪ್ಪಬೇಕಲ್ವ? ಅವರು ಒಪ್ಪಿಕೊಂಡರೆ ಒಳ್ಳೆದು ಆಗುತ್ತೆ ಎಂದಿದ್ದಾರೆ.
ನಂತರ ಬಿಜೆಪಿ ಪ್ರತಿಭಟನೆ ಸಂಬಂಧ ಮಾತನಾಡಿದ ಅವರು, ಅವರಿಗೆ ಏನಾದರೂ ಒಂದು ಸುದ್ದಿ ಸಿಗಬೇಕು. ಬಿಜೆಪಿ ಅವರಿಗೆ ಅವಕಾಶ ಸಿಗಬೇಕು ಅಷ್ಟೇ, ಆದ್ರೆ ಆಡಳಿತದಲ್ಲಿ ನಾವು ಏನು ಮಾಡಬೇಕು ಅದನ್ನ ಮಾಡ್ತೇವೆ ಎಂದರು.
ಇದೇ ವೇಳೆ NIA ಕಾರಗೃಹ ಇಲಾಖೆಗೆ ಪತ್ರ ಬರೆದಿರೋ ಬಗ್ಗೆ ಡಾ ಜಿ ಪರಮೇಶ್ವರ್ ಪ್ರತಿಕ್ರಿಯಿಸಿ, ಅದನ್ನ ಕೂಡ ಚರ್ಚೆ ಮಾಡ್ತೇನೆ, ಯಾಕೆಂದ್ರೆ ಅವರು observation ಮಾಡಿ. ಎವಿಡೆನ್ಸ್ ಇಟ್ಟುಕೊಂಡು ಮಾಡಿರುತ್ತಾರೆ, ಅದರ ಬಗ್ಗೆಯೂ ಇವತ್ತು ಚರ್ಚೆ ಮಾಡ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ : ಪ್ರೀತಿಸಿ ಮದುವೆಯಾದ ಯುವತಿಗೆ ಗಂಡನೇ ವಿಲನ್ – ಗರ್ಭಿಣಿಗೆ ಪತಿಯಿಂದಲೇ ಕಿರುಕುಳ.. ಹಸುಗೂಸು ಸಾವು!







