ಪ್ರೀತಿಸಿ ಮದುವೆಯಾದ ಯುವತಿಗೆ ಗಂಡನೇ ವಿಲನ್ – ಗರ್ಭಿಣಿಗೆ ಪತಿಯಿಂದಲೇ ಕಿರುಕುಳ.. ಹಸುಗೂಸು ಸಾವು!

ಹಾವೇರಿ : ಪ್ರೀತಿಸಿ ಮದುವೆಯಾದ ಯುವತಿಗೆ ಗಂಡನೇ ವಿಲನ್ ಆದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಸನಾಬಾದ್ ಗ್ರಾಮದಲ್ಲಿ ನಡೆದಿದೆ. ಮದುವೆಯಾದ 6 ತಿಂಗಳಿಗೆ ಗಂಡ ಯುವತಿಗೆ ಚಿತ್ರಹಿಂಸೆ ನೀಡಿದ್ದು, ಪತಿಯ ಕಿರುಕುಳಕ್ಕೆ ಹೊಟ್ಟೆಯಲ್ಲಿದ್ದ 6 ತಿಂಗಳಿನ ಹಸುಗೂಸು ಸಾವನ್ನಪ್ಪಿದೆ.

ಅಮೀರಬಿ & ಫಯಾಜ್ ಎಂಬುವವರು ಪ್ರೀತಿಸಿ ಮದುವೆಯಾಗಿದ್ದ ಜೋಡಿ. ಮದುವೆಗೆ ಮುಂಚಿತವೇ ಅಮೀರಬಿ ಮೂರು ತಿಂಗಳು ಗರ್ಭಿಣಿಯಾಗಿದ್ದಳು. ಬಳಿಕ ಇಬ್ಬರ ಪ್ರೀತಿಗೆ ಒಪ್ಪಿ ಅಮೀರಬಿ ಕುಟುಂಬಸ್ಥರು ಮದುವೆ ಮಾಡಿಸಿದ್ದರು. ಮದುವೆ ಬಳಿಕ ಅಮೀರಬಿಗೆ ಪಾಪಿ ಫಯಾಜ್ ಮತ್ತೆಸೂರು ಚಿತ್ರಹಿಂಸೆ ನೀಡ್ತಿದ್ದ. ಲಾಠಿ, ಕೊಡಲಿಯಿಂದ ಗರ್ಭಿಣಿ ಅನ್ನೋದು ನೋಡದೆ ಮನಬಂದಂತೆ ಹಲ್ಲೆ ಮಾಡಿದ್ದಾನೆ.

ಪತಿಯ ಕಿರುಕುಳಕ್ಕೆ ಆರು ತಿಂಗಳಿನ ಹಸುಗೂಸು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದೆ. ಸದ್ಯ ಫಯಾಜ್ ಮತ್ತೆಸೂರು ವಿರುದ್ಧ ಯವತಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಸ್ನೇಹಿತೆಯ ಸಾವು ತಡೆದುಕೊಳ್ಳಲಾಗದೇ ಬಾಲಕಿ ಆತ್ಮಹತ್ಯೆ?

Btv Kannada
Author: Btv Kannada

Read More