ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಎಲೆಕ್ಷನ್ – BTVಯ ಮೈಸೂರು ಬ್ಯೂರೋ ಮುಖ್ಯಸ್ಥ ಬಿ. ರಾಘವೇಂದ್ರಗೆ ಭರ್ಜರಿ ಗೆಲುವು!

ಮೈಸೂರು : BTV ನ್ಯೂಸ್​​ನ ಮೈಸೂರು ಬ್ಯೂರೋ ಮುಖ್ಯಸ್ಥರಾಗಿರುವ, ಹಿರಿಯ ಪತ್ರಕರ್ತ ಬಿ. ರಾಘವೇಂದ್ರ ಅವರು ಪತ್ರಕರ್ತರ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮೈಸೂರು ಜಿಲ್ಲಾ ಘಟಕದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ಬಿಟಿವಿ ನ್ಯೂಸ್ ಮೈಸೂರು ಬ್ಯೂರೋ ಮುಖ್ಯಸ್ಥ ಬಿ. ರಾಘವೇಂದ್ರ ಗೆಲುವು ಸಾಧಿಸಿದರು. ಮೈಸೂರು ಜಿಲ್ಲಾ‌ ಪತ್ರಕರ್ತರ ಸಂಘದಲ್ಲಿ ನಡೆದ ಚುನಾವಣೆಯಲ್ಲಿ ಬಿ. ರಾಘವೇಂದ್ರ ಅವರು 172 ಮತಗಳನ್ನು ಪಡೆದು ರಾಜ್ಯ ಸಮಿತಿಗೆ ಆಯ್ಕೆಯಾದರು. ಪ್ರತಿಸ್ಪರ್ಧಿಗಳಾದ ವಿ. ಮಹೇಶ್ ಕುಮಾರ್ 162 ಹಾಗೂ ಎಸ್.ಆರ್. ಮಧುಸೂದನ್ ಅವರು 21 ಮತಗಳನ್ನು ಪಡೆದು ಪರಾಭವಗೊಂಡರು.

ಚುನಾವಣಾಧಿಕಾರಿಗಳಾಗಿ ಕಾಶೀನಾಥ್ ಅವರು ಕಾರ್ಯನಿರ್ವಹಿಸಿದರು. ಇನ್ನೂ ಭರ್ಜರಿ ಗೆಲುವು ಸಾಧಿಸಿದ ಹಿರಿಯ ಪತ್ರಕರ್ತ ಬಿ.ರಾಘವೇಂದ್ರ ಅವರಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಗೌರವಿಸಿ ಅಭಿನಂದಿಸಿದೆ.

ಇದನ್ನೂ ಓದಿ : ಇಂದು ನಟ ದರ್ಶನ್ ಹಾಗೂ ಸಹಚರರ ಪಾಲಿಗೆ ಬಿಗ್ ಡೇ – ಟ್ರಯಲ್ ದಿನಾಂಕ‌ ನಿಗದಿ ಮಾಡಲಿರುವ ಕೋರ್ಟ್?

Btv Kannada
Author: Btv Kannada

Read More