ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಹಾಗೂ ಸಹಚರರ ಪಾಲಿಗೆ ಇಂದು ಬಿಗ್ ಡೇ ಆಗಿದೆ. ಕೋರ್ಟ್ ಇಂದು ಟ್ರಯಲ್ ದಿನಾಂಕವನ್ನು ನಿಗದಿ ಮಾಡಲಿದೆ.
ಕಳೆದ ಬಾರಿ ಕೋರ್ಟ್ ಆರೋಪಿಗಳ ವಿರುದ್ಧ ಚಾರ್ಜ್ ಫ್ರೇಮ್ ನಿಗದಿ ಮಾಡಿತ್ತು. ಇಂದು ಬೆಳಗ್ಗೆ 11 ಗಂಟೆ ನಂತರ ಕೋರ್ಟ್ ಟ್ರಯಲ್ ದಿನಾಂಕ ನಿಗದಿ ಮಾಡಲಿದೆ. ಹಾಗಾಗಿ ಇಂದು ಎಲ್ಲಾ ಆರೋಪಿಗಳನ್ನು ಕೋರ್ಟ್ಗೆ ಹಾಜರಾಗಲು ಸೂಚಿಸಿದ್ದು, ನಟ ದರ್ಶನ್ ಸೇರಿ ಒಟ್ಟು 6 ಮಂದಿ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲಿದ್ದಾರೆ. ಉಳಿದ ಎಲ್ಲಾ ಆರೋಪಿಗಳು ನೇರವಾಗಿ ಕೋರ್ಟ್ಗೆ ಹಾಜರಾಗಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯವು ಇಂದು ಯಾವ ಮಹತ್ವದ ನಿರ್ಧಾರ ಕೈಗೊಳ್ಳಲಿದೆ, ವಿಚಾರಣೆಯ ದಿನಾಂಕ ಯಾವಾಗ ನಿಗದಿಯಾಗಲಿದೆ ಎಂಬುದರ ಬಗ್ಗೆ ಎಲ್ಲರ ಚಿತ್ತ ಕೋರ್ಟ್ ಕಡೆ ನೆಟ್ಟಿದೆ.
ಇದನ್ನೂ ಓದಿ : ಬಿಗ್ಬಾಸ್ ಮಾಜಿ ಸ್ಪರ್ಧಿ ಉಗ್ರಂ ಮಂಜು ಎಂಗೇಜ್ಮೆಂಟ್ – ಮದುವೆ ಯಾವಾಗ?
Author: Btv Kannada
Post Views: 325







