ಸ್ಯಾಂಡಲ್ವುಡ್ ನಟ, ಬಿಗ್ ಬಾಸ್ ಮಾಜಿ ಸ್ಪರ್ಧಿ ಉಗ್ರಂ ಮಂಜು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಉಗ್ರಂ ಮಂಜು ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ… ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ… ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ. ಹೊಸ ಬಂಧದ ಆರಂಭ… ನಿಶ್ಚಿತಾರ್ಥದ ಸುಂದರ ಕ್ಷಣ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ ಎಂದು ಫೋಟೋ ಶೇರ್ ಮಾಡಿದ್ದಾರೆ.
ಉಗ್ರಂ ಮಂಜು ಕಿಚ್ಚ ಸುದೀಪ್ ಜೊತೆ ಮ್ಯಾಕ್ಸ್ ಮೂವಿಯಲ್ಲಿ ನಟಿಸಿದ್ದರು. ಅಲ್ಲಿಂದ ಅವರನ್ನು ಮ್ಯಾಕ್ಸ್ ಮಂಜು ಅಂತಲೂ ಕರೆಯಲಾಗುತ್ತಿದೆ. ಯಾಕೆ ಮದುವೆಯಾಗಿಲ್ಲ ಅಂತ ಅವರನ್ನು ಯಾವಾಗಲೂ ನೆಟ್ಟಿಗರು ಕೇಳುತ್ತಲೇ ಇದ್ದರು. ಈಗ ಅವರು ಮದುವೆ ನಿರ್ಧಾರ ಮಾಡಿದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಉಗ್ರಂ ಮಂಜು ಅಂತಾನೇ ಫೇಮಸ್ ಆಗಿರುವ ಮಂಜುನಾಥ್ ಗೌಡ ಅವರು ಉಗ್ರಂ ಸಿನಿಮಾದಲ್ಲಿ ವಿಲನ್ ರೋಲ್‌ನಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅವರು ಉಗ್ರಂ, ಕಿರಿಕ್ ಪಾರ್ಟಿ, ಹೀರೋ, ಕಿಡಿ, ಮ್ಯಾಕ್ಸ್, ರಂಗಸಮುದ್ರ, ಕಿರೀಟ, ರಾನಿ, ದೂರದರ್ಶನ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ : ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಸ್ಥಳದಲ್ಲೇ ಇಬ್ಬರ ದುರ್ಮರಣ!







