ಸ್ನೇಹಿತನ ನಿರ್ಲಕ್ಷ್ಯಕ್ಕೆ ಅಮಾಯಕ ಬಲಿ – ರಾತ್ರಿಯಿಡೀ ಒದ್ದಾಡಿ ಪ್ರಾಣಬಿಟ್ಟ ಅಪಘಾತಕ್ಕೀಡಾದ ವ್ಯಕ್ತಿ!

ಬೆಂಗಳೂರು : ಸ್ನೇಹಿತನ ನಿರ್ಲಕ್ಷ್ಯದಿಂದಾಗಿ ವ್ಯಕ್ತಿಯೋರ್ವ ರಾತ್ರಿಯಿಡೀ ಒದ್ದಾಡಿ ಜೀವ ಬಿಟ್ಟಿರುವ ಘಟನೆ ಬೆಂಗಳೂರಿನ KMF ಕಚೇರಿ ಬಳಿ ನಡೆದಿದೆ.

ಮೃತ ವ್ಯಕ್ತಿ ಗೂಡ್ಸ್ ವಾಹನದಲ್ಲಿ ತನ್ನ ಸ್ನೇಹಿತನ ಜೊತೆ ಬರ್ತಿದ್ದಾಗ ಏಕಾಏಕಿ ವಾಹನ ಪಲ್ಟಿಯಾಗಿದ್ದು, ತೀವ್ರ ಗಾಯಗೊಂಡಿದ್ದ ಯುವಕನನ್ನು ಆತನ ಸ್ನೇಹಿತ ವಿಶ್ರಾಂತಿಗಾಗಿ KMF ಫುಟ್ ಪಾತ್ ಮೇಲೆ ಮಲಗಿಸಿದ್ದ. ನಂತರ ಗಾಯಗೊಂಡು ಒದ್ದಾಡುತ್ತಿದ್ದ ವ್ಯಕ್ತಿ ಕೆಲ ಹೊತ್ತಿನ ನಂತರ ಪ್ರಜ್ಞೆ ತಪ್ಪಿದ್ದ. ಇದನ್ನು ನೋಡಿ ಭಯಗೊಂಡು ಗೂಡ್ಸ್ ವಾಹನ ಚಾಲಕ ಎಸ್ಕೇಪ್ ಆಗಿದ್ದ.

ರಾತ್ರಿಯಿಡೀ ಒದ್ದಾಡಿ 30-35 ವರ್ಷದ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾನೆ. ಯಾರಿಗೂ ಮಾಹಿತಿ ನೀಡದೇ ಪರಾರಿಯಾದ ಸ್ನೇಹಿತನ ನಿರ್ಲಕ್ಷ್ಯಕ್ಕೆ ವ್ಯಕ್ತಿ ಬಲಿಯಾಗಿದ್ದು, ಈ ಸಂಬಂಧ ಮೈಕೋ ಲೇಔಟ್ ಪೊಲೀಸರು  ಆ್ಯಕ್ಸಿಡೆಂಟ್ ಕೇಸ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ಬಗೆದಷ್ಟು ಬಯಲಾಗ್ತಿದೆ ಜೈಲಿನ ಕರ್ಮಕಾಂಡ – ಪರಪ್ಪನ ಅಗ್ರಹಾರದಲ್ಲಿ ಖೈದಿಗಳ ಎಣ್ಣೆ ಪಾರ್ಟಿ.. ವಿಡಿಯೋ ವೈರಲ್!

Btv Kannada
Author: Btv Kannada

Read More