ಬೆಂಗಳೂರು : ಜೈಲಿನ ಕರ್ಮಕಾಂಡ ಬಗೆದಷ್ಟು ಬಯಲಾಗ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಿದ ಹಿನ್ನೆಲೆ ನಿನ್ನೆ ಸಂಜೆ ಜೈಲಾಧಿಕಾರಿಗಳು ರೇಡ್ ಮಾಡಿದ್ದರು. ಈ ಬೆನ್ನಲ್ಲೇ ಜೈಲಿನೊಳಗೆ ಖೈದಿಗಳು ಮದ್ಯ ಸೇವಿಸಿ ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಖೈದಿಗಳು ಮದ್ಯ ಸೇವಿಸಿ ಡ್ಯಾನ್ಸ್ ಮಾಡುತ್ತಿದ್ದಾರೆ. ಡ್ರಮ್ ಮತ್ತು ತಟ್ಟೆಗಳನ್ನು ಬಳಸಿ ಖೈದಿಗಳು ಸಂಗೀತಕ್ಕೆ ನರ್ತಿಸಿದ್ದಾರೆ. ಖೈದಿಗಳು ನಾನ್ ವೆಜ್.. ಎಣ್ಣೆ ಪಾರ್ಟಿ.. ಫುಲ್ ಮೋಜು-ಮಸ್ತಿ ಮಾಡಿದ್ದಾರೆ. ರೇಪಿಸ್ಟ್ ಉಮೇಶ್ ರೆಡ್ಡಿ, ತರುಣ್ ಕೊಂಡೂರು ಮತ್ತು ಶಂಕಿತ ಉಗ್ರ ಶಕೀಲ್ ಅವರಿಗೆ ಜೈಲಿನೊಳಗೆ ಮೊಬೈಲ್, ಟಿವಿ ಸೇರಿದಂತೆ ಐಷಾರಾಮಿ ಸೌಲಭ್ಯಗಳು ಸಿಗುತ್ತಿದ್ದ ವಿಡಿಯೋಸ್ ವೈರಲ್ ಆಗಿತ್ತು. ಈ ಹಿನ್ನೆಲೆ ಜೈಲಾಧಿಕಾರಿಗಳು ರೇಡ್ ಮಾಡಿದ್ದರು.

ಮ್ಯಾರಥಾನ್ ರೀತಿಯಲ್ಲಿ ವೈರಲ್ ಆಗ್ತಿರುವ ಈ ವಿಡಿಯೋಗಳ ಬಗ್ಗೆ ಪೊಲೀಸರು ಮತ್ತು ಕಾರಾಗೃಹ ಇಲಾಖೆ ತನಿಖೆ ಆರಂಭಿಸಿದ್ದಾರೆ. ವೈರಲ್ ಆಗಿರುವ ಎಣ್ಣೆ ಪಾರ್ಟಿ, ಡ್ಯಾನ್ಸ್ ವಿಡಿಯೋ ನಿಜವಾಗಿಯೂ ಪರಪ್ಪನ ಅಗ್ರಹಾರದ್ದೇ ಅಥವಾ ಬೇರೆ ಜೈಲಿನದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಡಿಯೋಗಳು ಯಾವ ವರ್ಷದವು, ಅವುಗಳನ್ನು ರಿಲೀಸ್ ಮಾಡಿದ್ದು ಯಾರು ಮತ್ತು ಖೈದಿಗಳಿಗೆ ಈ ರೀತಿ ವಿಶೇಷ ಸೌಲಭ್ಯಗಳು ಸಿಗಲು ಜೈಲು ಸಿಬ್ಬಂದಿಯ ಪಾತ್ರ ಇದೆಯೇ ಎಂಬ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಭದ್ರಾ ನಾಲೆಗೆ ಕಾರು ಪಲ್ಟಿ – ಇಬ್ಬರು ಸಾವು, ನಾಲ್ವರು ಪಾರು!







