ಚಾಲಕನ ನಿಯಂತ್ರಣ ತಪ್ಪಿ ಭದ್ರಾ ನಾಲೆಗೆ ಕಾರು ಪಲ್ಟಿ – ಇಬ್ಬರು ಸಾವು, ನಾಲ್ವರು ಪಾರು!

ದಾವಣಗೆರೆ : ಚಾಲಕನ ನಿಯಂತ್ರಣ ತಪ್ಪಿ ಕಾರು ಭದ್ರಾ ನಾಲೆಗೆ ಪಲ್ಟಿಯಾಗಿ, ಇಬ್ಬರು ಸಾವನ್ನಪ್ಪಿದ ಘಟನೆ ಚನ್ನಗಿರಿ ತಾಲೂಕಿನ ಸೂಳೆಕೆರೆ ಬಳಿಯ ಹೊಸೂರಿನಲ್ಲಿ ನಡೆದಿದೆ. ದಾವಣಗೆರೆಯ ಮೂಲದ ಸಿದ್ದೇಶ್ (38), ಮಲ್ಲಿಕಾರ್ಜುನ್ (27) ಮೃತರು.

ಕಾರಿನಲ್ಲಿ ಆರು ಜನ ಮಂಗಳೂರು ಬಳಿಯ ಕೊರಗಜ್ಜನ ದೇವಸ್ಥಾನಕ್ಕೆ ಹೋಗಿ, ವಾಪಸ್‌ ಆಗುತ್ತಿದ್ದಾಗ ಈ ಅಪಘಾತ ನಡೆದಿದೆ. ನಾಲೆಯಲ್ಲಿ ಬಿದ್ದ ಕಾರು ಮತ್ತು ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ. ಸಂತೆಬೆನ್ನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ನೆಲಮಂಗಲದಲ್ಲಿ ಭೀಕರ ಅಪಘಾತ – ಇಬ್ಬರು ಸ್ಥಳದಲ್ಲೇ ಸಾವು!

Btv Kannada
Author: Btv Kannada

Read More