ನೆಲಮಂಗಲದಲ್ಲಿ ಭೀಕರ ಅಪಘಾತ – ಇಬ್ಬರು ಸ್ಥಳದಲ್ಲೇ ಸಾವು!

ನೆಲಮಂಗಲ : ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. 21 ವರ್ಷದ ಕೇಶವ್​ ಪ್ರಸಾದ್​​, 21 ವರ್ಷದ ಮಯೂರ್​​ ಮೃತ ದುರ್ದೈವಿಗಳು.

ಈ ಅಪಘಾತ ಮಾಗಡಿ ತಾಲೂಕಿನ ರಸ್ತೆ ಪಾಳ್ಯದ ಗಾಂಧಿ ಫಾರಂ ಬಳಿ ನಡೆದಿದೆ. ಬೆಂಗಳೂರು ಮಾರ್ಗವಾಗಿ ಹಾಸನ ಕಡೆ ಸಾಗುವ ವೇಳೆ ಈ ಅಪಘಾತ ಸಂಭವಿಸಿದ್ದು, ಅತೀ ವೇಗದಿಂದ ಬಂದ ಬೈಕ್ ರಸ್ತೆಯ ಡಿವೈಡರ್​​ಗೆ ಡಿಕ್ಕಿ ಹೊಡೆದಿದೆ.

ಮೃತರಿಬ್ಬರು ಬೆಂಗಳೂರಿನ ನಿವಾಸಿಗಳಾಗಿದ್ದು, ಘಟನಾ ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಶಾಸಕ ಸತೀಶ್​​ ಸೈಲ್​ ವಿರುದ್ಧ ಅಕ್ರಮ ಅದಿರು ಪ್ರಕರಣ – ವಿಶೇಷ ನ್ಯಾಯಾಲಯದಿಂದ ಜಾಮೀನು ರದ್ದು!

Btv Kannada
Author: Btv Kannada

Read More