ಶಾಸಕ ಸತೀಶ್​​ ಸೈಲ್​ ವಿರುದ್ಧ ಅಕ್ರಮ ಅದಿರು ಪ್ರಕರಣ – ವಿಶೇಷ ನ್ಯಾಯಾಲಯದಿಂದ ಜಾಮೀನು ರದ್ದು!

ಬೆಂಗಳೂರು : ಅಕ್ರಮ ಅದಿರು ರಫ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸತೀಶ್​ ಸೈಲ್​ ಅವರಿಗೆ ಭಾರೀ ಹಿನ್ನಡೆಯಾಗಿದ್ದು, ನಿನ್ನೆ ಸತೀಶ್​ ಸೈಲ್ ಅವರ ಜಾಮೀನನ್ನು ರದ್ದುಪಡಿಸಿ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ವೈದ್ಯಕೀಯ ಕಾರಣಗಳನ್ನು ನೀಡಿ ತಾತ್ಕಾಲಿಕ ಜಾಮೀನು ಪಡೆದಿದ್ದ ಸೈಲ್​ ಅವರ ಜಾಮೀನನ್ನು ಇದೀಗ ಕೋರ್ಟ್ ರದ್ದುಗೊಳಿಸಿದೆ. ಈವರೆಗೆ ಈ ಪ್ರಕರಣ ತನಿಖೆಯಲ್ಲಿ ಶಾಸಕ ಸತೀಶ್​ ಸೈಲ್​ ಅವರ 64 ಕೋಟಿ ಆಸ್ತಿಯನ್ನು ED ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಸತೀಶ್​ ಸೈಲ್​ ಅವರು ಗಣಿ ಭೂವಿಜ್ಞಾನ ಮತ್ತು ಅರಣ್ಯ ಇಲಾಖೆಗಳ ಪರವಾನಿಗೆ ಇಲ್ಲದ ಅದಿರನ್ನು ಅಕ್ರಮವಾಗಿ ಸಂಗ್ರಹಿಸಿ, ಚೀನಾ ಸೇರಿದಂತೆ ಹಲವು ವಿದೇಶಗಳಿಗೆ ರಫ್ತು ಮಾಡುತ್ತಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. 2010ರಲ್ಲಿ ಅರಣ್ಯ ಇಲಾಖೆಯು ಮಂಗಳೂರಿನ ಬಂದರಿಗೆ ಭೇಟಿ ನೀಡಿ ಅನಧಿಕೃತವಾಗಿ ಸಂಗ್ರಹಿಸಿದ್ದ ಸುಮಾರು 5 ಲಕ್ಷ ಮೆಟ್ರಿಕ್ ಟನ್ ಅದಿರನ್ನು ವಶಪಡಿಸಿಕೊಂಡು ವರದಿ ಸಲ್ಲಿಸಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ED, PMLA ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.

ಸದ್ಯ ಈ ಪ್ರಕರಣ ಸಂಬಂಧ ED ಕರ್ನಾಟಕ, ಗೋವಾ, ದೆಹಲಿ, ಮುಂಬೈ ರಾಜ್ಯದ 15 ಸ್ಥಳಗಳಲ್ಲಿ ಶೋಧ ನಡೆಸಿತ್ತು. ಸತೀಶ್​ ಸೈಲ್​​ ಬಂಧಿಸಿ ED 8 ಕೋಟಿ ನಗದು, ಚಿನ್ನ ವಶಪಡಿಸಿಕೊಂಡಿತ್ತು. ಅಕ್ರಮ ಅದಿರು ಪ್ರಕರಣದ ತನಿಖೆ ತೀವ್ರಗೊಂಡಿರುವ ನಡುವೆಯೇ ಶಾಸಕರ ಜಾಮೀನು ರದ್ದಾಗಿದೆ.

ಇದನ್ನೂ ಓದಿ : ಪೊಲೀಸರ ಮೇಲೆಯೇ ಅಟ್ಯಾಕ್​ ಮಾಡಿ ಎಸ್ಕೇಪ್​ಗೆ​ ಯತ್ನ – ಕೊಲೆ ಆರೋಪಿಗೆ ಗುಂಡೇಟು!

Btv Kannada
Author: Btv Kannada

Read More