ಪೊಲೀಸರ ಮೇಲೆಯೇ ಅಟ್ಯಾಕ್​ ಮಾಡಿ ಎಸ್ಕೇಪ್​ಗೆ​ ಯತ್ನ – ಕೊಲೆ ಆರೋಪಿಗೆ ಗುಂಡೇಟು!

ಬೆಂಗಳೂರು : ಕಿಡ್ನ್ಯಾಪ್, ಕೊಲೆ ಪ್ರಕರಣಗಳ ಆರೋಪಿ ಮೇಲೆ ಪೊಲೀಸರು ಫೈರಿಂಗ್ ನಡೆಸಿರುವ ಘಟನೆ ಬೆಂಗಳೂರಿನ ಬೊಮ್ಮಸಂದ್ರ ಬಳಿ ನಡೆದಿದೆ. ಆರೋಪಿ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಪೊಲೀಸರು ಆತನ ಮೇಲೆ ಫೈರಿಂಗ್​ ನಡೆಸಿದ್ದಾರೆ.

ಕಿಡ್ನಾಪ್​ & ಇಬ್ಬರ ಕೊಲೆ ಪ್ರಕರಣದ ಆರೋಪಿಯಾಗಿರುವ ಆಂಧ್ರ ಮೂಲದ ರವಿ ರೆಡ್ಡಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ನವೆಂಬರ್ 4 ಹಾಗೂ 6ರಂದು ರವಿರೆಡ್ಡಿ & ಟೀಂ ಬಾಲಪ್ಪ ರೆಡ್ಡಿ ಸೇರಿ ಇಬ್ಬರನ್ನ ಹತ್ಯೆಗೈದಿದ್ದು, ಈ ಸಂಬಂಧ ಹೆಬ್ಬಗೋಡಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ ವೇಳೆ ರವಿರೆಡ್ಡಿ ಕಾಲಿಗೆ ಹೆಬ್ಬಗೋಡಿ ಇನ್ಸ್​​​ಪೆಕ್ಟರ್ ಸೋಮಶೇಖರ್ ಫೈರಿಂಗ್ ಮಾಡಿದ್ದಾರೆ. ಸದ್ಯ ನಟೋರಿಯಸ್ ಹಂತಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾನೆ.

ಡಬಲ್​ ಮರ್ಡರ್​ಗೆ ಹಂತಕ ಪ್ಲ್ಯಾನ್​ ಮಾಡಿದ್ದೇಗೆ ಗೊತ್ತಾ? 

ರವಿರೆಡ್ಡಿ ಪರಿಚಯಸ್ಥ ಮಹದೇಶನನ್ನ ಕೊಲೆ ಮಾಡಿದ್ದ. ಕೊಲೆಗಾರ ರವಿರೆಡ್ಡಿ ಹೆಬ್ಬಗೋಡಿಯಲ್ಲಿ ಪ್ರಾವಿಜನ್ ಸ್ಟೋರ್ ಇಟ್ಕೊಂಡಿದ್ದ, ಅದೇ ಏರಿಯಾದಲ್ಲಿ ಮಹದೇಶ್ ಟೀ ಶಾಪ್ ನಡೆಸ್ತಿದ್ದ. ಮಹದೇಶ್ ಜಾಗ ಮಾರಿ ಮನೆಯಲ್ಲಿ 15 ಲಕ್ಷ ಇಟ್ಟುಕೊಂಡಿದ್ದ, ಈ ವಿಚಾರ ರವಿರೆಡ್ಡಿಗೆ ತಿಳಿದಿರುತ್ತೆ. ಮೈತುಂಬಾ ಸಾಲಮಾಡಿಕೊಂಡಿದ್ದ ರವಿರೆಡ್ಡಿ ಮಹದೇಶನನ್ನ ಸುಲಿಗೆಗೆ ಪ್ಲ್ಯಾನ್​​ ಮಾಡಿದ್ದ. ಅದರಂತೆ ಮಹದೇಶ ಬೇರೊಬ್ಬರಿಗೆ ಕೊಟ್ಟ ಹಣ ರಿಕವರಿ ಮಾಡಿಕೊಡ್ತೀನಿ ಅಂತ ರವಿರೆಡ್ಡಿ ಹೇಳ್ತಾನೆ. ಹೀಗೆ ಹೇಳಿದವ್ನು 4ನೇ ತಾರೀಖು ಮಹದೇಶನ ಕಿತ್ತಗನಹಳ್ಳಿ‌ ಮನೆಗೆ ತೆರಳ್ತಾನೆ. ಮನೆಗೆ ತೆರಳುವಾಗ್ಲೇ ರವಿರೆಡ್ಡಿ ಏರ್ ಗನ್ ಹಾಗೂ ಚಾಕು ತೆಗೊಂಡಿರ್ತಾನೆ.

ಮಹದೇಶನನ್ನ ಹೆದರಿಸಿ ಮನೆಯಲ್ಲಿರೋ ಹಣವನ್ನ ಕೊಡುವಂತೆ ಬೆದರಿಸಿದ್ದ. ಇದರಿಂದ ಪ್ಯಾನಿಕ್ ಆದ ಮಹದೇಶ ಜೋರಾಗಿ ಕೂಗಿಕೊಳ್ತಾನೆ. ಅಷ್ಟೇ, ಚಾಕುವಿನಿಂದ ಮಹದೇಶನ ಕತ್ತು‌ ಸೀಳಿ ಕೊಂದೇಬಿಟ್ಟಿದ್ದ. ಅದಾದ ಎರಡೇ ದಿನಕ್ಕೆ ರವಿರೆಡ್ಡಿ ಮತ್ತೊಂದು ಸ್ಕೆಚ್ ಹಾಕಿದ್ದ, ತಾನು ನಡೆಸ್ತಿದ್ದ ಪ್ರಾವಿಜನ್ ಸ್ಟೋರ್ ಬಿಲ್ಡಿಂಗ್​​ನ ಮಾಲೀಕನಿಗೆ ಹಳ್ಳತೋಡಿದ್ದ. 61 ವರ್ಷದ ಬಾಲಪ್ಪನಿಗೆ ತಾನು ಬಾಕಿ ಉಳಿದ ಬಾಡಿಗೆ ಕೊಡ್ತೀನಿ ಬನ್ನಿ ಅಂತಾನೆ. ಬಾಲಪ್ಪನ ಕಾರಿನಲ್ಲೇ ರವಿರೆಡ್ಡಿ ಜಿಗಣಿ ರಿಂಗ್ ರೋಡ್ ಹತ್ತಿರ ಕರೆದೊಯ್ದಿದ್ದ. ಅದಾದ ಬಳಿಕ ಬಾಲಪ್ಪನಿಗೆ ಚಾಕು ತೋರಿಸಿ ನಿನ್ನನ್ನ ಕಿಡ್ನ್ಯಾಪ್​​ ಮಾಡಿದ್ದೀನಿ, ನಿನ್ನ ಮಗನ ಹತ್ತಿರ 1 ಕೋಟಿ ಕ್ಯಾಶ್ ತರಿಸಿ ಕೊಟ್ಬಿಡು ಅಂತ ಡಿಮ್ಯಾಂಡ್​​ ಮಾಡ್ತಾನೆ. ಆದ್ರೆ, ಬಾಲಪ್ಪ ಇದೆಲ್ಲ ನನ್ನತ್ರ ನಡೆಯಲ್ಲಿ ಅಂತ ಆವಾಜ್ ಹಾಕಿದ್ದ. ಅಷ್ಟಕ್ಕೆ ಸಿಟ್ಟಾದ ರವಿರೆಡ್ಡಿ ಚಾಕುವಿನಿಂದ ಬಾಲಪ್ಪನ ಕತ್ತನ್ನ ಸೀಳಿ ಕೊಲೆ ಮಾಡಿದ್ದಾನೆ.

ನಂತರ ಶವವನ್ನ ಹೊಸೂರು ಕಾಡಿನ ಪ್ರದೇಶಕ್ಕೆ ಕೊಂಡೊಯ್ದು ಎಸೀತಾನೆ. ಈ ಎರಡೂ ಕೊಲೆ ಪ್ರಕರಣ ಹೆಬ್ಬಗೋಡಿ ಪೊಲೀಸರ ನಿದ್ದೆಗೆಡಿಸಿತ್ತು, ಸಿಸಿಟಿವಿ ಫಾಲೋಪ್ ಮಾಡಿದ್ದ ಪೊಲೀಸ್ ಟೀಂನಿಂದ ರವಿರೆಡ್ಡಿಯನ್ನು ಅರೆಸ್ಟ್ ಮಾಡಿತ್ತು. ಹೀಗೆ ನಿನ್ನೆ ಕೊಲೆ ಪ್ರಕರಣದಲ್ಲಿ ಬೊಮ್ಮಸಂದ್ರಕ್ಕೆ ರವಿರೆಡ್ಡಿಯನ್ನ ಪೊಲೀಸರು ಕರೆದೊಯ್ದತ್ತಾರೆ. ಈ ವೇಳೆ ಪೊಲೀಸ್ ಹೆಡ್ ಕಾನ್ಸ್​​ಟೇಬಲ್ ಅಶೋಕ್ ಮೇಲೆ ರವಿರೆಡ್ಡಿ ಹಲ್ಲೆಗೆ ಮುಂದಾಗಿದ್ದ, ಈ ವೇಳೆ ಇನ್ಸ್​ಪೆಕ್ಟರ್ ಸೋಮಶೇಖರ್ ಗಾಳಿಯಲ್ಲಿ ಗುಂಡನ್ನ ಹಾರಿಸಿ ವಾರ್ನಿಂಗ್ ನೀಡ್ತಾರೆ. ಆದ್ರೆ, ರವಿ ಮತ್ತೆ ಪೊಲೀಸರ‌ ಮೇಲೆಯೇ ದಂಡೆತ್ತಿ ಬರ್ತಾನೆ, ಇದರಿಂದ ಆತ್ಮರಕ್ಷಣೆಗಾಗಿ ಇನ್ಸ್​​ಪೆಕ್ಟರ್ ಸೋಮಶೇಖರ್ ರವಿ ಕಾಲಿಗೆ ಗುಂಡು ಹಾರಿಸ್ತಾರೆ.

ಇದನ್ನೂ ಓದಿ : ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ – ವಿಡಿಯೋ ವೈರಲ್.. ಜೈಲಾಧಿಕಾರಿಗಳಿಂದಲೇ ರೇಡ್!

Btv Kannada
Author: Btv Kannada

Read More