ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ – ವಿಡಿಯೋ ವೈರಲ್.. ಜೈಲಾಧಿಕಾರಿಗಳಿಂದಲೇ ರೇಡ್!

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಿದ ಹಿನ್ನೆಲೆ ನಿನ್ನೆ ಸಂಜೆ ಜೈಲಾಧಿಕಾರಿಗಳು ರೇಡ್ ಮಾಡಿದ್ದಾರೆ. ಜೈಲಾಧಿಕಾರಿಗಳು ನಿನ್ನೆ ಜೈಲಿನ ಎಲ್ಲಾ ಬ್ಯಾರಕ್​​ಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.

ಅತ್ಯಾಚಾರ ಪ್ರಕರಣದ ಆರೋಪಿ ಉಮೇಶ್ ರೆಡ್ಡಿ ಜೈಲಿನ ಬ್ಯಾರಕ್‌ನಲ್ಲಿ ಟಿವಿ ನೋಡುತ್ತಾ, ಕೈಯಲ್ಲಿ ಮೊಬೈಲ್ ಬಳಸುತ್ತಿರುವ ವಿಡಿಯೋ ನಿನ್ನೆ ವೈರಲ್ ಆಗಿತ್ತು. ಹೀಗಾಗಿ ನಿನ್ನೆ ಸಂಜೆ ಒಟ್ಟು 100 ಮಂದಿ ಜೈಲು ಸಿಬ್ಬಂದಿ ಎಲ್ಲಾ ಬ್ಯಾರಕ್‌ಗಳಲ್ಲಿ ತಲಾಶ್ ನಡೆಸಿದರು. ಆದ್ರೆ, ಜೈಲಾಧಿಕಾರಿಗಳ ರೇಡ್ ಮಾಹಿತಿ ಕೆಲ‌ ಸಿಬ್ಬಂದಿಯಿಂದ ಲೀಕ್ ಆಗಿತ್ತು. ಹಾಗಾಗಿ ಎಲ್ಲಾ ಬ್ಯಾರಕ್ ತಲಾಶ್ ಮಾಡಿದ್ರೂ ಏನೂ ಸಿಕ್ಕಿಲ್ಲ.

ಮತ್ತೊಂದ್ಕಡೆ ರೇಪಿಸ್ಟ್ ಉಮೇಶ್ ರೆಡ್ಡಿ ಮೊಬೈಲ್ ಬಳಸುವ ವಿಡಿಯೋವು 2023ರಲ್ಲಿ ಚಿತ್ರೀಕರಣಗೊಂಡಿದ್ದು, ಅದು ಈಗ ವೈರಲ್ ಆಗಿದೆ. ಈ ವಿಡಿಯೋಗಳು ಚಿತ್ರೀಕರಣವಾದ ಸಂದರ್ಭದಲ್ಲಿ ಬ್ಯಾರಕ್‌ಗಳ ಬಳಿ ಭದ್ರತೆಗಿದ್ದ ಸಿಬ್ಬಂದಿ ಮತ್ತು ಆ ವೇಳೆ ಕರ್ತವ್ಯದಲ್ಲಿದ್ದ ಜೈಲರ್‌ಗಳ ಪಟ್ಟಿ ನೀಡಲು ಮೇಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಜೈಲಿನ ಕೆಲ ಸಿಬ್ಬಂದಿಯಿಂದಲೇ ಪಿತೂರಿ ನಡೆದಿರೋ ಶಂಕೆ ವ್ಯಕ್ತವಾಗಿದೆ. ಕೆಲ ಜೈಲಿನ ಸಿಬ್ಬಂದಿಯ ಗುಂಪಿನಿಂದ ವಿಡಿಯೋಗಳು ವೈರಲ್ ಆಗಿದೆ ಎನ್ನಲಾಗಿದೆ. ಈ ಗಂಭೀರ ಬೆಳವಣಿಗೆಗಳ ಕುರಿತು ಜೈಲಾಧಿಕಾರಿಗಳು ಮತ್ತು ಡಿಐಜಿ ಆನಂದ್ ರೆಡ್ಡಿ ಅವರು ಎಡಿಜಿಪಿ ದಯಾನಂದ್ ಅವರಿಗೆ ಮಾಹಿತಿ ನೀಡಿದ್ದಾರೆ. ಅದರ ಬೆನ್ನಲ್ಲೇ, ಮೊಬೈಲ್ ಬಳಕೆ ಮತ್ತು ವಿಡಿಯೋ ವೈರಲ್ ಕುರಿತಾಗಿ ಸಂಪೂರ್ಣ ಆಂತರಿಕ ತನಿಖೆ ನಡೆಸಲು ಆದೇಶ ನೀಡಲಾಗಿದೆ.

ಇದನ್ನೂ ಓದಿ : `Iʼll Marry Vijay’- ಕೊನೆಗೂ ವಿಜಯ್​ನ ಮದುವೆಯಾಗುವುದಾಗಿ ಒಪ್ಪಿಕೊಂಡ ರಶ್ಮಿಕಾ!  

Btv Kannada
Author: Btv Kannada

Read More