ವಿಜಯನಗರ : ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ (MCH) ವೈದ್ಯರ ನಿರ್ಲಕ್ಷ್ಯದಿಂದಾಗಿ ಅವಳಿ ಗಂಡು ಮಕ್ಕಳು ಸಾವನ್ನಪ್ಪಿರುವ ಗಂಭೀರ ಮತ್ತು ಆಘಾತಕಾರಿ ಘಟನೆ ನಡೆದಿದೆ. ವೈದ್ಯರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮೃತ ಮಕ್ಕಳ ಪೋಷಕರು ಒತ್ತಾಯಿಸಿ, ಕಣ್ಣೀರು ಹಾಕಿದ್ದಾರೆ.

ಹಗರಿಬೊಮ್ಮನಹಳ್ಳಿ ನಿವಾಸಿಗಳಾದ ಪರ್ವೀನ್ ಬಾನು ಮತ್ತು ಹುಸೇನ್ ಭಾಷಾ ದಂಪತಿಯ ಅವಳಿ ಗಂಡು ಮಕ್ಕಳು ಮೃತಪಟ್ಟ ದುರ್ದೈವಿಗಳು. ನಾವು ಮಧ್ಯಾಹ್ನ 1:30ಕ್ಕೆ ಆಸ್ಪತ್ರೆಗೆ ಬಂದರೂ, ರಾತ್ರಿ 8:30ರವರೆಗೂ ಯಾವುದೇ ವೈದ್ಯರು ನಮ್ಮನ್ನು ಪರೀಕ್ಷಿಸಲಿಲ್ಲ. ಕೇವಲ ಸ್ಟಾಫ್ ನರ್ಸ್‌ಗಳು ಮಾತ್ರ ನೋಡಿದ್ದಾರೆ. ಸುಮಾರು ಏಳು ಗಂಟೆಗಳ ಕಾಲ ವೈದ್ಯರಿಗಾಗಿ ಕಾಯಬೇಕಾಯಿತು ಎಂದು ಆರೋಪಿಸಿದ್ದಾರೆ.

ವೈದ್ಯರ ಈ ನಿರ್ಲಕ್ಷ್ಯವೇ ತಮ್ಮ ಮಕ್ಕಳ ಸಾವಿಗೆ ಮುಖ್ಯ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಮಕ್ಕಳನ್ನು ಕಳೆದುಕೊಂಡ ತಾಯಿ ಪರ್ವೀನ್ ಬಾನು ಅವರು ಕಣ್ಣೀರು ಹಾಕುತ್ತಾ, “ನಮ್ಮ ಮಕ್ಕಳ ಮುಖವನ್ನೂ ನೋಡಲು ಆಗಲಿಲ್ಲ” ಎಂದು ಗೋಳಾಡಿದ್ದಾರೆ. ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದಂಪತಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ‘ಲವ್ ಕೇಸ್’ ಚಿತ್ರದ ಅದ್ಧೂರಿ ಮುಹೂರ್ತ!







