ಬೆಂಗಳೂರು : ಭ್ರಷ್ಟಾಚಾರ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರಿನ ಆರು RTO ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಪೊಲೀಸರು ಕೆ.ಆರ್.ಪುರಂ, ಯಲಹಂಕ, ಜಯನಗರ, ರಾಜಾಜಿನಗರ, ಕಸ್ತೂರಿ ನಗರ ಮತ್ತು ಯಶವಂತಪುರ ಸೇರಿದಂತೆ ಒಟ್ಟು ಆರು RTO ಕಚೇರಿಗಳ ಮೇಲೆ ರೇಡ್ ಮಾಡಿ, ದಾಖಲೆಗಳನ್ನು ಪರಿಶೀಲನೆ ಮಾಡ್ತಿದ್ದಾರೆ.
ಯಶವಂತಪುರ RTO ಕಚೇರಿಯ ಮೇಲೆ ಸ್ವತಃ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಅವರ ನೇತೃತ್ವದಲ್ಲಿಯೇ ದಾಳಿ ನಡೆಸಿದ್ದಾರೆ. ಇತರ ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ ಸ್ಫೋಟ – ಹೈವೇಗಳು ಬಂದ್.. ಥಂಡಾ ಹೊಡೆದ ಸರ್ಕಾರ!
Author: Btv Kannada
Post Views: 465







