ಆರೋಪಿಗೆ ಅರ್ಥ ಆಗುವ ಭಾಷೆಯಲ್ಲಿ ಪ್ರಕರಣ ಬಗ್ಗೆ ಮಾಹಿತಿ ನೀಡಿ – ಪೊಲೀಸರಿಗೆ ಸುಪ್ರೀಂಕೋರ್ಟ್ ಸೂಚನೆ!

ಅಪರಾಧ ಪ್ರಕರಣಗಳಲ್ಲಿ ಭಾಷೆಯ ಪ್ರಾಮುಖ್ಯತೆ ಬಗ್ಗೆ ಸುಪ್ರೀಂಕೋರ್ಟ್ ಮತ್ತೆ ಸ್ಪಷ್ಟನೆ ಕೊಟ್ಟಿದೆ. ಪೊಲೀಸರು ಅಥವಾ ಅಧಿಕಾರಿಗಳು ಯಾವುದೇ ವ್ಯಕ್ತಿಯನ್ನು ಬಂಧಿಸಿದರೆ ಆತನಿಗೆ ಆ ಪ್ರಕರಣದ ಬಗ್ಗೆ ಆತನಿಗೆ ತಿಳಿದ ಭಾಷೆಯಲ್ಲಿ ಸಂಪೂರ್ಣ ಮಾಹಿತಿ ನೀಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.

ಬಂಧನಕ್ಕೆ ಕಾರಣಗಳನ್ನು ಆರೋಪಿಗೆ ಅರ್ಥವಾಗುವ ಭಾಷೆಯಲ್ಲಿ ನೀಡಬೇಕು, ಒಂದು ವೇಳೆ ಬಂಧಿತನಿಗೆ ಅರ್ಥವಾಗದ ಭಾಷೆಯಲ್ಲಿ ಲಿಖಿತ ಆಧಾರಗಳಿದ್ದರೆ ಅದು ಕಾನೂನುಬಾಹಿರವಾಗುತ್ತೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಸೀಹ್ ಅವರ ಪೀಠವು ಈ ಆದೇಶವನ್ನು ನೀಡಿದೆ. ಅದಾಗ್ಯೂ, ಬಂಧನಕ್ಕೆ ಮೊದಲು ಅಥವಾ ನಂತರ ತಕ್ಷಣವೆ ಬಂಧನಕ್ಕೆ ಕಾರಣಗಳನ್ನು ಲಿಖಿತವಾಗಿ ಒದಗಿಸದಿದ್ದರೆ, ಸರಿಯಾದ ಸಮಯದೊಳಗೆ ಮತ್ತು ಬಂಧನಕ್ಕೊಳಗಾದ ವ್ಯಕ್ತಿಯನ್ನು ಯಾವುದೇ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ಎರಡು ಗಂಟೆಗಳ ಮೊದಲು ಲಿಖಿತವಾಗಿ ಒದಗಿಸಿದರೆ ಆದೇಶದ ಉಲ್ಲಂಘನೆ ಮಾಡಿದಂತೆ ಆಗುವುದಿಲ್ಲ ಎಂದು ಹೇಳಿದೆ.

2024ರ ಜುಲೈನಲ್ಲಿ ಮುಂಬೈನಲ್ಲಿ ನಡೆದ ಬಿಎಂಡಬ್ಲ್ಯೂ ‘ಹಿಟ್ ಆ್ಯಂಡ್ ರನ್’ ಘಟನೆಗೆ ಸಂಬಂಧಿಸಿದ ಮಿಹಿರ್ ರಾಜೇಶ್ ಶಾ ಪ್ರಕರಣದಲ್ಲಿ ಈ ತೀರ್ಪು ಹೊರಬಿದ್ದಿದೆ.

ಇದನ್ನೂ ಓದಿ : ಸ್ಟಾರ್ ಕ್ರಿಕೆಟರ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಅನುಷ್ಕಾ ಶೆಟ್ಟಿ? ಆ ಖ್ಯಾತ ಆಟಗಾರ ಯಾರು?

Btv Kannada
Author: Btv Kannada

Read More