ಟಾಲಿವುಡ್‌ನ ಟಾಪ್ ಹೀರೋಯಿನ್‌ಗಳಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿ, ಎಲ್ಲರ ಕಣ್ಣುಗಳು ನಟಿ ಅನುಷ್ಕಾ ಶೆಟ್ಟಿ ಅವರ ಮದುವೆಯ ಮೇಲಿವೆ. ಅವರ ಮದುವೆಗೆ ಸಂಬಂಧಿಸಿದಂತೆ ವಿವಿಧ ಸುದ್ದಿಗಳು ಆಗಾಗ ಹರಿದಾಡುತ್ತಿರುತ್ತದೆ. ಇದೀಗ ನಟಿ ಅನುಷ್ಕಾ ಶೆಟ್ಟಿ ಕ್ರಿಕೆಟಿಗನನ್ನು ಮದುವೆಯಾಗಲಿದ್ದಾಳೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಅನುಷ್ಕಾ ಟಾಲಿವುಡ್‌ನ ಖ್ಯಾತ ನಿರ್ದೇಶಕರೊಬ್ಬರ ಮಗನನ್ನು ಮದುವೆಯಾಗಲಿದ್ದಾರೆ ಎಂದು ಹಲವು ವೆಬ್‌ಸೈಟ್‌ಗಳಲ್ಲಿ ಸುದ್ದಿಯಾಗಿತ್ತು. ಆದರೆ ಅನುಷ್ಕಾ ಕೂಡ ಇದನ್ನು ನಿರಾಕರಿಸಿದ್ದರು. ಅಷ್ಟೇ ಅಲ್ಲದೆ ನಾಯಕ ಪ್ರಭಾಸ್ ಜೊತೆ ಅನುಷ್ಕಾ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿ ಸದಾ ವೈರಲ್ ಆಗುತ್ತಲೇ ಇರುತ್ತದೆ. ಇದಕ್ಕೆ ಪ್ರತಿಕ್ರಿಯಿಸಿದ ಇಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದಾರೆ. ಆದರೂ ವದಂತಿಗಳು ಬರುತ್ತಲೇ ಇವೆ. ಅನುಷ್ಕಾ ಅವರ ಮದುವೆಯ ಬಗ್ಗೆ ಹಲವು ವದಂತಿಗಳಿವೆ, ಆದರೆ ಅವು ಒಮ್ಮೆಯೂ ನಿಜವಾಗಲಿಲ್ಲ.

ಆದರೆ ಇತ್ತೀಚೆಗೆ ಸ್ವತಃ ಅನುಷ್ಕಾನೇ ತನ್ನ ಮದುವೆಯ ಬಗ್ಗೆ ಮಾತನಾಡಿದ್ದಾಳೆ. ಸಂದರ್ಶನವೊಂದರಲ್ಲಿ, ನಾನು ವಿವಾಹ ಪದ್ಧತಿಯನ್ನು ನಂಬುತ್ತೇನೆ. ನಾನು ಮದುವೆಗೆ ಎಂದಿಗೂ ವಿರೋಧಿಸುವುದಿಲ್ಲ. ಸಮಯ ಬಂದಾಗ ನಾನು ಖಂಡಿತವಾಗಿಯೂ ಮದುವೆಯಾಗುತ್ತೇನೆ ಎಂದು ಅನುಷ್ಕಾ ಹೇಳಿದ್ದಾರೆ. ಈ ಅನುಷ್ಕಾ ಮದುವೆಯ ಸುದ್ದಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಆಕೆ ಕ್ರಿಕೆಟಿಗನನ್ನು ಮದುವೆಯಾಗಲು ಸಿದ್ಧಳಾಗಿದ್ದಾಳೆ ಎಂಬ ವರದಿಗಳಿವೆ. ಆದರೆ ಈ ಸುದ್ದಿ ನಿಜವೋ? ಸುಳ್ಳೋ? ಅನ್ನೋದು ತಿಳಿದಿಲ್ಲ. ಆದರೆ ಸದ್ಯ ಈ ಸುದ್ದಿ ಹರಿದಾಡುತ್ತಿದೆ.
ಇದನ್ನೂ ಓದಿ : ರಶ್ಮಿಕಾ-ವಿಜಯ್ ಮದುವೆ ಡೇಟ್ ಫಿಕ್ಸ್ – ಮದುವೆ ಎಲ್ಲಿ, ಯಾವಾಗ ಗೊತ್ತಾ?







