ರಶ್ಮಿಕಾ-ವಿಜಯ್ ಮದುವೆ ಡೇಟ್ ಫಿಕ್ಸ್ – ಮದುವೆ ಎಲ್ಲಿ, ಯಾವಾಗ ಗೊತ್ತಾ?

ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಇಬ್ಬರೂ ಇತ್ತೀಚೆಗಷ್ಟೇ ತಮ್ಮ ವಿವಾಹ ನಿಶ್ಚಿತಾರ್ಥ ಮುಗಿಸಿಕೊಂಡು ಮದುವೆಗೆ ರೆಡಿಯಾಗಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಇದೀಗ ಫೆಬ್ರವರಿಯಲ್ಲೇ ಮದುವೆ ನಡೆಯುತ್ತೆ ಅನ್ನೋದು ಬಹುತೇಕ ಖಚಿತವಾದಂತಾಗಿದೆ. 2026ರ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಈ ಜೋಡಿ ಹಸೆಮಣೆ ಏರಲಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಸಹಜವಾಗಿ ದಕ್ಷಿಣ ಭಾರತದಲ್ಲಿ ಮದುವೆಯನ್ನು ಹುಡುಗಿಯ ಮನೆಯವರೇ ನಡೆಸಿಕೊಡುವುದರಿಂದ ರಶ್ಮಿಕಾ ಅವರ ತವರೂರಾದ ಕೊಡಗಿನಲ್ಲೇ ಮದುವೆ ನಡೆಯುಬಹುದು ಎಂದು ಕೆಲವರು ಊಹಿಸಿದ್ದರು. ಇನ್ನೂ ಕೆಲವರು ರಶ್ಮಿಕಾ ಅವರು ತೆಲುಗು ಚಿತ್ರರಂಗದಲ್ಲೇ ಈಗ ಹೆಚ್ಚು ಸಕ್ರಿಯವಾಗಿರುವುದರಿಂದ ಮದುವೆ ಹೈದರಾಬಾದ್ ನಲ್ಲೇ ನಡೆಯಬಹುದು ಎಂದು ಊಹಿಸಿದ್ದರು. ಆದ್ರೆ ಇವರಿಬ್ಬರ ಮದುವೆ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ.

ರಾಜಸ್ಥಾನದ ಉದಯಪುರದ ಅರಮನೆಯೊಂದರಲ್ಲಿ ಈ ಜೋಡಿಯ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ. ಇದಕ್ಕಾಗಿ ಅಲ್ಲಿನ ಐಷಾರಾಮಿ ಪ್ಯಾಲೇಸ್-ಹೋಟೆಲೊಂದರ ಹುಡುಕಾಟದಲ್ಲಿ ರಶ್ಮಿಕಾ ಮದುವೆ ಜವಾಬ್ದಾರಿ ಹೊತ್ತಿರುವ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದು ಹುಡುಕಾಟ ನಡೆಸಿದೆ. ಮೂರು ಪ್ಯಾಲೇಸ್ ಹೋಟೆಲ್‌ಗಳನ್ ಫೈನಲೈಸ್ ಮಾಡಲಾಗಿದ್ದು ಅವುಗಳಲ್ಲೊಂದನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.

ಫೆಬ್ರವರಿಯಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಅದಕ್ಕಾಗಿ ಈಗಾಗಲೇ ತಯಾರಿ ಆರಂಭವಾಗಿದೆ. ಮದುವೆಗೆ ಬೇಕಾದ ಎಲ್ಲಾ ವಸ್ತ್ರಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗುತ್ತಿದೆ. ಅದೂ ಸೇರಿದಂತೆ ಆಮಂತ್ರಣ ಪತ್ರಿಕೆಯ ಡಿಸೈನ್ ಬಗ್ಗೆಯೂ ಚರ್ಚೆಗಳು ನಡೆಯುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ‘ನವೆಂಬರ್ ಕ್ರಾಂತಿ’ ಬೆನ್ನಲ್ಲೇ ಸಿಎಂ ಆಪ್ತನ ಮನೆಯಲ್ಲಿ ಡಿನ್ನರ್ ಪಾರ್ಟಿ – ಇಂದು KN ರಾಜಣ್ಣ ನಿವಾಸದಲ್ಲಿ ಔತಣಕೂಟ!

Btv Kannada
Author: Btv Kannada

Read More