ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ICUನಲ್ಲಿದೆ, ರಾಜ್ಯ ಸರ್ಕಾರ ಪಾಪರ್ ಆಗಿದೆ, ದಿವಾಳಿ ಆಗೋಗಿದೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರವೇ ಅಸ್ತಿತ್ವದಲ್ಲಿ ಇಲ್ಲ,
ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ-ಡಿಕೆಶಿ ಕಿತ್ತಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ತಮಿಳುನಾಡಿನಲ್ಲಿ ಆರ್.ಅಶೋಕ್ ಮಾತನಾಡಿ, 1 ವರ್ಷದಿಂದ ಸಿಎಂ ಪೋಸ್ಟ್ಗಾಗಿ ಇಬ್ಬರೂ ಕಿತ್ತಾಡುತ್ತಿದ್ದಾರೆ. 1 ವರ್ಷದಿಂದಲೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳೇ ಆಗ್ತಿಲ್ಲ. 10 ದಿನಗಳಿಂದ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ಯಾರಂಟಿಗಳಿಂದ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ, ಡಿಕೆ ಶಿವಕುಮಾರ್ ಮುಂದಿನ ಕರ್ನಾಟಕದ ಸಿಎಂ ಆಗ್ತಾರೆ. ಸಿದ್ದರಾಮಯ್ಯ ಸರಕಾರದಲ್ಲಿ ಹಣ ಇಲ್ಲ ಎಂದು ಕಿಡಿ ಕಾರಿದ್ದಾರೆ.
ನವೆಂಬರ್-ಡಿಸೆಂಬರ್ನಲ್ಲಿ ಮುಖ್ಯಮಂತ್ರಿ ಚೇಂಜ್ ಆಗ್ತಾರೆ, ಬಿಹಾರದ ಚುನಾವಣೆಗೆ ಕಾಂಗ್ರೆಸ್ ಸರ್ಕಾರ ATM ಆಗಿದೆ. ಕರ್ನಾಟಕ ಸರ್ಕಾರದ ತೆರಿಗೆ ಹಣ ಬಿಹಾರಕ್ಕೆ ಹೋಗುತ್ತಿದೆ. ಶೇಕಡ 60ರಷ್ಟು ಕಮಿಷನ್ ನಡೆಯುತ್ತಿದೆ ಆದಷ್ಟು ಬೇಗ ಸರ್ಕಾರ ಬೀಳುತ್ತೆ ಎಂದು ಸರ್ಕಾರ ಪತನ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಲೆ ಸರಿ ಇಲ್ಲ. ಸುಖಾಸುಮ್ಮನೆ ಚುನಾವಣಾ ಆಯೋಗದ ಮೇಲೆ ಆರೋಪ ಮಾಡುತ್ತಾರೆ. ಭಾರತೀಯ ಸೇನೆಯಲ್ಲೂ ಕೂಡ ಮೀಸಲಾತಿ ಬಗ್ಗೆ ಮಾತಾಡ್ತಾರೆ, ರಾಹುಲ್ ಗಾಂಧಿ ಚೈಲ್ಡ್ ತರ ಆಡ್ತಾರೆ, ಫೂಲಿಶ್ನೆಸ್ ತರ ಮಾತಾಡ್ತಾರೆ. ರಾಹುಲ್ ಗಾಂಧಿ ಬಿಟ್ಟರೇ ಕಾಂಗ್ರೆಸ್ ಪಕ್ಷದಲ್ಲಿ ನಾಯಕರೇ ಇಲ್ಲ, ಲೋಕಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ರಾಹುಲ್ ಗಾಂಧಿ ಅನ್ಫಿಟ್ ಎಂದು ಆರ್.ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಕೊನೆಯ ಎಚ್ಚರಿಕೆ… ರಾಜ್ಯ ಸರ್ಕಾರಕ್ಕೆ ಮತ್ತೊಂದು ಡೆಡ್ಲೈನ್ ನೀಡಿದ ಕಬ್ಬು ಬೆಳೆಗಾರರು!







