ಬಿಎಂಟಿಸಿ ಸುಮನಹಳ್ಳಿ ಡಿಪೋದಲ್ಲಿ ಆರ್ಥಿಕ ಅಶಿಸ್ತು- ಲೆಕ್ಕ ವಿಭಾಗದ ಸಿಬ್ಬಂದಿ ಅಮಾನತು!

ಬೆಂಗಳೂರು : ಬಿಎಂಟಿಸಿ (BMTC) ಯ ಸುಮನಹಳ್ಳಿ ಡಿಪೋದಲ್ಲಿ ನಡೆದಿರುವ ಆರ್ಥಿಕ ಅಶಿಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಲೆಕ್ಕ ವಿಭಾಗದ ಓರ್ವ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಸಂಸ್ಥೆಯ ಲೆಕ್ಕ ಇಲಾಖೆಯು ಸುಮನಹಳ್ಳಿ ಡಿಪೋ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಈ ಆರ್ಥಿಕ ಅಕ್ರಮ ಬಯಲಾಗಿದೆ.

ಪರಿಶೀಲನೆಯ ವೇಳೆ ಸುಮಾರು 2 ಲಕ್ಷ ರೂಪಾಯಿಗಳ ಹಣ ದುರುಪಯೋಗ ಆಗಿರುವುದು ಪತ್ತೆಯಾಗಿದೆ. ಈ ಹಣವನ್ನು ಡಿಪೋಗೆ ಪಾವತಿಸದೆ ಉಳಿಸಿಕೊಂಡಿದ್ದು ಕಂಡುಬಂದಿದೆ. ಆರ್ಥಿಕ ಅಶಿಸ್ತಿಗೆ ಕಾರಣವಾದ ಲೆಕ್ಕ ವಿಭಾಗದ ಸಿಬ್ಬಂದಿ ರಾಜೇಶ್ ಅವರು ಹಣ ಪಾವತಿಸದಿರುವ ಕುರಿತು ಸೂಕ್ತ ಸ್ಪಷ್ಟೀಕರಣ ನೀಡದ ಕಾರಣ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ, ಸಿಬ್ಬಂದಿ ರಾಜೇಶ್ ಅವರನ್ನು ತಕ್ಷಣವೇ ಅಮಾನತು ಮಾಡಿ ಭದ್ರತಾಧಿಕಾರಿ ಆದೇಶ ಹೊರಡಿಸಿದ್ದಾರೆ. ಸಂಸ್ಥೆಯ ಒಳಗೆ ಆರ್ಥಿಕ ಅಶಿಸ್ತು ಮತ್ತು ದುರುಪಯೋಗವನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಕ್ರಮದ ಮೂಲಕ ಬಿಎಂಟಿಸಿ ರವಾನಿಸಿದೆ.

ಇದನ್ನೂ ಓದಿ : ಬರೋಬ್ಬರಿ 536 GRP ಪಡೆದು ನಂಬರ್‌ 1 ಸ್ಥಾನಕ್ಕೇರಿದ ಕಲರ್ಸ್ ಕನ್ನಡ ಚಾನೆಲ್!

Btv Kannada
Author: Btv Kannada

Read More