ಕಲರ್ಸ್ ಕನ್ನಡದ ‘ಗಂಧದ ಗುಡಿ’ ಯಲ್ಲಿ ರವಿ ಕಾಳೆ!

ಭಾರತೀಯ ಚಿತ್ರರಂಗದ ಪ್ರಸಿದ್ಧ ಪೋಷಕ ನಟ ರವಿ ಕಾಳೆ ‘ಶ್ರೀಗಂಧದಗುಡಿ’ ಧಾರಾವಾಹಿಯಲ್ಲಿ ಗೌರವ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಶ್ರೀಗಂಧದಗುಡಿ’ ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದ್ದು ಪ್ರತಿ ರಾತ್ರಿ 8 ಕ್ಕೆ ಪ್ರಸಾರವಾಗುತ್ತಿದೆ.

ಧಾರಾವಾಹಿಯ ಕತೆಯು ಅತ್ಯಂತ ಕುತೂಹಲದ ಘಟ್ಟ ತಲುಪಿದೆ. ಚಂದನಾ ಹರಿಗೆ ತಾನು ಈ ಮನೆಯಲ್ಲಿ ಇರಲಾಗುವುದಿಲ್ಲ ಮತ್ತು ತನ್ನ ಗುರಿಗಳನ್ನು ಸಾಧಿಸಲು ಬೆಂಗಳೂರಿಗೆ ಹೋಗಬೇಕೆಂದು ಹೇಳುತ್ತಾಳೆ. ಆಕೆ ಹರಿಯ ಸಹಾಯ ಕೇಳುತ್ತಾಳೆ. ಹರಿ ಆಕೆಗೆ ರಾತ್ರಿ ಹೋಗುವಂತೆ ಹೇಳುತ್ತಾನೆ ಮತ್ತು ತಾನೇ ಕರೆದುಕೊಂಡು ಹೋಗುವುದಾಗಿ ಹೇಳುತ್ತಾನೆ. ಆದರೆ ಬೆಂಗಳೂರಿಗೆ ಹೊರಡುವ ಮಾರ್ಗದಲ್ಲಿ ಚಂದನಾ ಮಾಡಿದ ಒಂದು ತಪ್ಪಿನಿಂದ ಕುಟುಂಬಕ್ಕೆ ಆಕೆ ಮನೆ ಬಿಟ್ಟಿರುವುದು ಗೊತ್ತಾಗುತ್ತದೆ.

ಇದರಿಂದ ಒಂದು ಚೇಸ್ ಆರಂಭವಾಗುತ್ತದೆ. ಚಂದನಾಳ ತಂದೆ ಮಹಾಬಲ ತನ್ನ ಸಂಪರ್ಕ ಬಳಸಿ ದಾಳಿ ಮಾಡುತ್ತಾನೆ. ತನ್ನನ್ನು ರಕ್ಷಿಸಿಕೊಳ್ಳಲು ಹರಿ ಪೊಲೀಸ್ ಠಾಣೆಗೆ ಶರಣಾಗುತ್ತಾನೆ. ಅಲ್ಲಿ ಇನ್‌ಸ್ಪೆಕ್ಟರ್ ಕಾಳೆ ಪ್ರತ್ಯಕ್ಷ ಆಗುತ್ತಾರೆ. ಕಾಳೆ ಈ ಧಾರಾವಾಹಿಯ ಕತೆಗೆ ಟರ್ನಿಂಗ್ ಪಾಯಿಂಟ್ ಆಗುತ್ತಾರೆ.

ಕಾಳೆ ಹೇಳುವುದು ಏನೆಂದರೆ, ಹರಿಯನ್ನೂ ಚಂದನಾಳನ್ನೂ ಉಳಿಸುವ ಏಕೈಕ ಮಾರ್ಗ ಎಂದರೆ ಅವರಿಬ್ಬರೂ ಮದುವೆಯಾಗಬೇಕು. ಈ ಪರಿಸ್ಥಿತಿಯನ್ನು ಹರಿ ತನ್ನ ಪ್ರಯೋಜನಕ್ಕೆ ಬಳಸಿಕೊಳ್ಳುತ್ತಾನೆ ಮತ್ತು ಹೇಗೆ ಅವರ ಮದುವೆ ನಡೆಯುತ್ತದೆ ಎಂಬುದು ಅತ್ಯಂತ ಆಸಕ್ತಿಕರ. ಈ ಕುತೂಹಲಕರ ರೋಮಾಂಚಕ ಎಪಿಸೋಡ್ ಗಳನ್ನು ತಪ್ಪದೇ ನೋಡಿ ಕಲರ್ಸ್ ಕನ್ನಡದಲ್ಲಿ. ವಾರದ ಏಳೂ ದಿನ ಪ್ರತಿ ರಾತ್ರಿ 8 ಕ್ಕೆ.

ಇದನ್ನೂ ಓದಿ : ಕಾರು-ಬೈಕ್ ಮುಖಾಮುಖಿ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಸಾವು!

Btv Kannada
Author: Btv Kannada

Read More