ಬೆಂಗಳೂರು : 500 ರೂಪಾಯಿ ಚೇಂಜ್ ಹೆಸರಲ್ಲಿ 20 ಸಾವಿರಕ್ಕೆ ಕನ್ನ ಹಾಕಿರುವ ಘಟನೆ ಬೆಂಗಳೂರಿನ ಸುಬ್ರಮಣ್ಯನಗರದಲ್ಲಿ ನಡೆದಿದೆ. ಹಾಲು ಮಾರ್ತಿದ್ದ ಹನುಮಂತಯ್ಯ ಎಂಬುವವರಿಗೆ ಮಹಮ್ಮದ್ ಸಿಕಂದರ್ ಎಂಬಾತ ವಂಚನೆ ಮಾಡಿದ್ದಾನೆ.
ಹನುಮಂತಯ್ಯ ಹಾಲು ಮಾರ್ತಿದ್ದಾಗ ಬೈಕಲ್ಲಿ ಬಂದ ಮಹಮ್ಮದ್ ಸಿಕಂದರ್ 500 ರೂ. ಚೇಂಜ್ ಬೇಕಿತ್ತು ಸಿಗುತ್ತಾ ಸರ್ ಎಂದು ಕೇಳಿದ್ದಾನೆ. ಈ ವೇಳೆ 20 ಸಾವಿರದ ಚೀಲ ತೆಗೆದು ಹನುಮಂತಯ್ಯ ಚೇಂಜ್ ಕೊಡೋಕೆ ಮುಂದಾದಾಗ ಸಿಕಂದರ್ ನೋಟನ್ನು ಜೋಡಿಸಿ ಕೊಡ್ತೀನಿ ಕೊಡಿ ಎಂದ್ನಂತೆ. ಹೀಗಂತಿದ್ದಂತೆ ಹನುಮಂತಯ್ಯ ನೋಟಿನ ಕಟ್ಟು ಸಿಕಂದರ್ಗೆ ಕೊಡ್ತಾರೆ. ಹೀಗಂತಿದ್ದಂತೆ ಹನುಮಂತಯ್ಯ ನೋಟಿನ ಕಟ್ಟು ಸಿಕಂದರ್ಗೆ ಕೊಡ್ತಾರೆ. ದುಡ್ಡು ಕೈಗೆ ಸಿಗ್ತಿದ್ದಂತೆ ವಂಚಕ ಸಿಕಂದರ್ ಬೈಕ್ನಲ್ಲಿ ಎಸ್ಕೇಪ್ ಆಗಿದ್ದಾನೆ.
ಈ ಸಂಬಂಧ ಸುಬ್ರಮಣ್ಯನಗರ ಠಾಣೆಯಲ್ಲಿ ಹನುಮಂತಯ್ಯ ದೂರು ನೀಡಿದ್ದು, ಕೇಸ್ ದಾಖಲಿಸಿಕೊಂಡು ಖಾಕಿ ಸಿಕಂದರ್ ಕೈಗೆ ಕೋಳ ತೊಡಿಸಿದೆ.
ಇದನ್ನೂ ಓದಿ : ಸಾಫ್ಟ್ವೇರ್ ಇಂಜಿನಿಯರ್ ONE ಸೈಡ್ ಲವ್ ಕಥೆ – ಹುಡುಗನ ಒಲಿಸಿಕೊಳ್ಳಲು ಬಾಂಬ್ ಬೆದರಿಕೆ.. ಜೈಲುಪಾಲು!







