ಲಂಚಕ್ಕೆ ಡಿಮ್ಯಾಂಡ್ – ಸಾವಿರಾರು ರೂ. ಲಂಚ ಪಡೆಯುವಾಗ ‘ಲೋಕಾ’ ಬಲೆಗೆ ಬಿದ್ದ PDO ಅನಿತಾ ರಾಥೋಡ್!

ಬೀದರ್ : ಇ-ಸ್ವತ್ತು ಮಾಡಿಕೊಡಲು 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಔರಾದ್​ ತಾಲ್ಲೂಕಿನ ಧೂಪತಮಹಾಗಾಂವ ಗ್ರಾ.ಪಂ PDO ಅನಿತಾ ರಾಥೋಡ್ ಅನ್ನು ಬೀದರ್ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ.

ಔರಾದ್ ತಾಲ್ಲೂಕಿನ ಧೂಪತಮಹಾಗಾಂವ ಗ್ರಾಮ ಪಂಚಾಯತಿ PDO ಅನಿತಾ ರಾಥೋಡ್ ಅವರು, ರಾಜಕುಮಾರ್ ಪಾಟೀಲ್ ಎಂಬುವವರು ಸಲ್ಲಿಸಿದ್ದ ಇ-ಸ್ವತ್ತು ಅರ್ಜಿ ವಿಲೇವಾರಿಗೆ ಸಂಬಂಧಿಸಿದಂತೆ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಧೂಪತಮಹಾಗಾಂವ ಗ್ರಾಪಂ ಕಚೇರಿಯಲ್ಲಿ ಮುಂಗಡವಾಗಿ 12 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ PDO ಅನಿತಾ ರಾಥೋಡ್ ಮತ್ತು ಈಕೆಯ ಪತಿ ದಯಾನಂದ ರಾಠೋಡ್ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದು ಅರೆಸ್ಟ್ ಮಾಡಿದ್ದಾರೆ.

ಬೀದರ್ ಲೋಕಾಯುಕ್ತ ಡಿವೈಎಸ್ಪಿ ಹಣಮಂತರಾಯಪ್ಪ ಅವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.

ಇದನ್ನೂ ಓದಿ : ತಲೈವಾ 173ನೇ ಸಿನಿಮಾಗಾಗಿ ಒಂದಾದ ರಜನಿಕಾಂತ್-ಕಮಲ್ ಹಾಸನ್!

Btv Kannada
Author: Btv Kannada

Read More