ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ – 120 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ.. ಹಲವು ದಿನಗಳ ಕಾಯುವಿಕೆ ಅಂತ್ಯ!

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಹಲವು ದಿನಗಳಿಂದ ಕುತೂಹಲದಿಂದ ಕಾಯುತ್ತಿದ್ದ 120 ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ ಕರ್ನಾಟಕ ಸರ್ಕಾರ ಕೊನೆಗೂ ಸಿಹಿ ಸುದ್ದಿ ನೀಡಿದೆ. ಸರ್ಕಾರವು ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಬೆಂಗಳೂರು ಗಡಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದು, ಈ ವರ್ಗಾವಣೆಯಿಂದಾಗಿ ಕಾಯುತ್ತಿದ್ದ ಇನ್ಸ್‌ಪೆಕ್ಟರ್‌ಗಳ ಮುಖದಲ್ಲಿ ಮಂದಹಾಸ ಮೂಡಿದೆ.

ಇಂದು ಆಗುತ್ತೆ ನಾಳೆ ಆಗುತ್ತೆ ಎಂದು ದಿನಗಳನ್ನು ಎಣಿಸುತ್ತಿದ್ದ ಇನ್ಸ್‌ಪೆಕ್ಟರ್‌ಗಳಿಗೆ ಕೊನೆಗೂ ವರ್ಗಾವಣೆಯ ಭಾಗ್ಯ ಸಿಕ್ಕಿದೆ. ಇನ್ನು ರಾಜ್ಯದ ಪ್ರಮುಖ ಜಿಲ್ಲೆಗಳು ಮತ್ತು ಪ್ರಾದೇಶಿಕ ಗಡಿ ಭಾಗಗಳಿಗೆ ವರ್ಗಾವಣೆ ನಡೆದಿದ್ದರೂ, ಬೆಂಗಳೂರು ನಗರಕ್ಕೆ ಮಾತ್ರ ಮೀನಾಮೇಷ ಮುಂದುವರೆದಿದೆ. ಒಂದೆರಡು ಬೆಂಗಳೂರು ಠಾಣೆಗಳನ್ನು ಹೊರತುಪಡಿಸಿದರೆ, ಉಳಿದ ಯಾವುದೇ ಪ್ರಮುಖ ನಗರ ಠಾಣೆಗಳಿಗೂ ವರ್ಗಾವಣೆ ಪಟ್ಟಿ ಬಿಡುಗಡೆಯಾಗಿಲ್ಲ.

ವರ್ಗಾವಣೆಯಾದ 120 ಠಾಣೆಗಳ ಪೈಕಿಯಲ್ಲಿ ಹಾಟ್ ಸೀಟಲ್ಲಿ ಕೂತವರ ಹೆಸರು ಹೀಗಿದೆ :

  • ರಾಮನಗರ ಗ್ರಾಮಾಂತರ ಠಾಣೆ-  ಮುರುಳಿ.ಟಿ
  • ದೇವನಹಳ್ಳಿ ಸಂಚಾರ ಠಾಣೆ – ಮುರಳೀಧರ.ಡಿ
  • ಬಿಡಿಎ ವಿಜಿಲೆನ್ಸ್ ಇನ್ಸ್‌ಪೆಕ್ಟರ್-  ಸತೀಶ್.ಸಿ
  • ಮಾಗಡಿ ಪೊಲೀಸ್ ಠಾಣೆ –  ಗಂಗಾಧರ್.ಟಿ.ಎಂ
  • ವಿಶ್ವನಾಥಪುರ ಪೊಲೀಸ್ ಠಾಣೆ – ಶಶಿಧರ್ ಎಸ್.ಡಿ

ಈ ವರ್ಗಾವಣೆ ಪ್ರಕ್ರಿಯೆಯು ರಾಜ್ಯದ ಪೊಲೀಸ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ. ಶೀಘ್ರದಲ್ಲೇ ಬೆಂಗಳೂರು ನಗರ ಪೊಲೀಸ್ ಠಾಣೆಗಳಿಗೂ ವರ್ಗಾವಣೆ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : ‘ಗತವೈಭವ’ದ‌ ಮೂಲಕ ಗಟ್ಟಿ‌ಯಾಗಿ ನಿಲ್ಲುವ ಭರವಸೆಯಲ್ಲಿ ದುಷ್ಯಂತ್!

Btv Kannada
Author: Btv Kannada

Read More