ಬೆಂಗಳೂರು : ಎಣ್ಣೆ ಕಿಕ್ನಲ್ಲಿ ಬೇಕರಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಬೆಂಗಳೂರಿನ ತ್ಯಾಗರಾಜ ನಗರದ 2ನೇ ಬ್ಲಾಕ್ನಲ್ಲಿ ನಡೆದಿದೆ. ಮದನ್ ಎಂಬ ಕಳ್ಳನು ಸಿಮೆಂಟ್ ಬ್ಲಾಕ್‌ನಿಂದ ನಂದೀಶ್ವರ ಬೇಕರಿಯ ಬೀಗವನ್ನು ಒಡೆಯಲು ಯತ್ನಿಸಿದ್ದಾನೆ.

ನಗರದಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಂದೀಶ್ವರ ಬೇಕರಿಯಲ್ಲಿ ಕಳ್ಳ ಈ ಕೃತ್ಯವೆಸಗಿದ್ದಾನೆ. ಈ ವೇಳೆ ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರು ಕಳ್ಳತನಕ್ಕೆ ಯತ್ನಿಸುತ್ತಿದ್ದ ಮದನ್‌ನನ್ನು ಗಮನಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಜನರು ಕಳ್ಳನನ್ನು ಹಿಡಿದು 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಹೊಯ್ಸಳ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದ ನಂತರ ಆರೋಪಿ ಮದನ್ ಕುಮಾರ್ ತಾನು ಬಳೆಗೆರೆ ನಿವಾಸಿ ಹೊಟ್ಟೆ ಹಸಿವಿಗಾಗಿ ಕಳ್ಳತನ ಮಾಡುತ್ತಿದ್ದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕಾರಿಗೆ ಬೈಕ್ ಅಡ್ಡ ನಿಲ್ಲಿಸಿ ಪುಂಡಾಟ – ದಾರಿ ಬಿಡುವಂತೆ ಕೇಳಿದ್ದಕ್ಕೆ ಚಾಲಕನಿಗೆ ರಾಡ್‌ನಿಂದ ಹಲ್ಲೆ!







