ಬೆಂಗಳೂರು : ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಮಿತಿ ಮೀರಿದೆ. ದಾರಿ ಬಿಡುವಂತೆ ಕೇಳಿದಕ್ಕೆ ಕಾರು ಚಾಲಕನ ಮೇಲೆ ರಾಡ್ನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಮುನೆಕೊಳಾಲಿನಲ್ಲಿ ನಡೆದಿದೆ.

ಬೆಂಗಳೂರಿನ ವಾರ್ಡ್ ನಂಬರ್ 149ರ ಮುನೆಕೊಳಾಲು ಬಳಿ ಕೆಲವು ಕಿಡಿಗೇಡಿಗಳು ತಮ್ಮ ಬೈಕ್ಗಳನ್ನು ಕಾರಿಗೆ ಅಡ್ಡ ನಿಲ್ಲಿಸಿ ಪುಂಡಾಟ ನಡೆಸಿದ್ದಾರೆ. ಹಾಗಾಗಿ ಕಾರು ಚಾಲಕ ರಾಮಚಂದ್ರ ದಾರಿ ಬಿಡುವಂತೆ ಕೇಳಿದ್ದಾರೆ. ಈ ವೇಳೆ ಮೋನಿಶ್ ರೆಡ್ಡಿ, ಪ್ರಕಾಶ್ ರೆಡ್ಡಿ ಮತ್ತು ಮಂಜುನಾಥ್ ರೆಡ್ಡಿ ಸಹಚರರು ರಾಮಚಂದ್ರ ಅವರ ಮೇಲೆ ರಾಡ್ನಿಂದ ಹಲ್ಲೆ ನಡೆಸಿದೆ. ರಾಡ್ನ ಏಟಿನಿಂದಾಗಿ ರಾಮಚಂದ್ರ ಅವರ ತಲೆಗೆ ಗಾಯಗಳಾಗಿವೆ.

ಇದನ್ನು ಕೇಳಲು ರಾಮಚಂದ್ರ ಸಹೋದರ ಸುರೇಶ್ ಮೇಲೂ ಪುಂಡರು ರಾಡ್ನಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಗಾಯಗೊಂಡಿರುವ ಕಾರು ಚಾಲಕ ರಾಮಚಂದ್ರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಭೀಕರ ಘಟನೆ – ಮಾಂಗಲ್ಯ ಸರಕ್ಕಾಗಿ ಉಸಿರುಗಟ್ಟಿಸಿ ವೃದ್ಧೆಯ ಕೊಲೆ!







