ದಾವಣಗೆರೆ : ದಾವಣಗೆರೆಯಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಅಮಾಯಕ ಯುವಕರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಮೂಲದ ಶ್ರೀನಾಥ್ ವಂಚನೆ ಮಾಡಿದ ಆರೋಪಿ. ರಾಜ್ಯ ಜಲಸಂಪನ್ಮೂಲ ಇಲಾಖೆಯ ಗ್ರೂಪ್ ಡಿ ವಿಭಾಗದಲ್ಲಿ ನಕಲಿ ನೇಮಕಾತಿ ಪತ್ರಗಳನ್ನು ಸಿದ್ಧಪಡಿಸಿ, ಸರ್ಕಾರಿ ನೌಕರಿ ಆಮಿಷವೊಡ್ಡಿ ಹತ್ತಾರು ಯುವಕರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾನೆ.

ನಕಲಿ ಸೀಲು ಮತ್ತು ಸಹಿಗಳೊಂದಿಗೆ ನೇಮಕಾತಿ ಪತ್ರ ತಯಾರಿಸಿ, ಅಧಿಕೃತ ಆದೇಶದಂತೆ ಹಣ ಕೊಟ್ಟವರ ಮನೆ ವಿಳಾಸಕ್ಕೆ ಕಳುಹಿಸುತ್ತಿದ್ದನು. ಕೆಲವರು ಬಡ್ಡಿಗೆ ಸಾಲ ಪಡೆದು, ತಾಯಿಯ ತಾಳಿ ಅಡವಿಟ್ಟು ಹಣ ನೀಡಿದ್ದಾರೆ. ವಂಚಕ ಶ್ರೀನಾಥ್‌ನನ್ನು ದಾವಣಗೆರೆ ಪೊಲೀಸರು ವಶಕ್ಕೆ ಪಡೆದಿದ್ದು, ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಲಿಫ್ಟ್‌ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಂದಿದ್ದ ಮಹಿಳೆ ಅರೆಸ್ಟ್!
Author: Btv Kannada
Post Views: 320







