ಬೆಂಗಳೂರು : ಬೆಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಎಮರೈಟ್ಸ್ ಗೋಲ್ಡ್ ಅಂಗಡಿ ಹೆಸರಲ್ಲಿ ವಂಚಿಸ್ತಿದ್ದ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಕೇರಳ ಮೂಲದ ಸಲಾಂ, ಅಜಿತ್ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ ಸಿಸಿಬಿ ಪೊಲೀಸರು 1.5 ಕೋಟಿ ಮೌಲ್ಯದ 1.5 ಕೆಜಿ ಗೋಲ್ಡ್ ಸೀಜ್ ಮಾಡಿದ್ದಾರೆ. ಬಂಧಿತ ಖತರ್ನಾಕ್ ಆರೋಪಿ ಸಲಾಂ ಚಿನ್ನದಂಗಡಿ ಇಟ್ಟಿದ್ದ. ಅಡವಿಟ್ಟುಕೊಂಡ ಚಿನ್ನ ರಾಶಿ ರಾಶಿ ಕೂಡಿ ಹಾಕಿ ಅಂಗಡಿಗೆ ಬೀಗ ಹಾಕ್ತಿದ್ದ. ಚಿನ್ನಾಭರಣವನ್ನು ಕರಗಿಸಿ ಮತ್ತೆ ಜ್ಯುವೆಲ್ಲರಿ ಮಾಡಿ ಮಾರಾಟ ಮಾಡ್ತಿದ್ದ. ಬಂಧಿತ ಸಲಾಂ ಕೇರಳ, ಮಂಗಳೂರು ಭಾಗದಲ್ಲೂ ಇದೇ ಕೃತ್ಯ ಎಸಗಿದ್ದ.

ಆರೋಪಿ ಸಲಾಂ ವಿದ್ಯಾರಣ್ಯಪುರದಲ್ಲಿ ಎಮರೈಟ್ಸ್ ಗೋಲ್ಡ್ ಹೆಸರಲ್ಲಿ ಅಂಗಡಿ ತೆರೆದಿದ್ದ. ಈ ಬಗ್ಗೆ ಹಲವು ದೂರು ಬಂದಿದ್ದರಿಂದ ಸಿಸಿಬಿ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಸದ್ಯ ಆರೋಪಿಗಳನ್ನ ಬಂಧಿಸಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಮಾಜಿ ಸಚಿವ ಹೆಚ್.ವೈ. ಮೇಟಿ ವಿಧಿವಶ!
Author: Btv Kannada
Post Views: 309







