ಕನ್ನಡದ ನಟಿಗೆ ಪ್ರೈವೇಟ್ ಪಾರ್ಟ್​ ಕಳಿಸಿ ಸೆಕ್ಸ್​​ ಟಾರ್ಚರ್ – ವ್ಯಕ್ತಿ ವಿರುದ್ಧ ಕೇಸ್ ದಾಖಲು!

ಬೆಂಗಳೂರು : ಕನ್ನಡದ ನಟಿಗೆ ಪ್ರೈವೇಟ್ ಪಾರ್ಟ್​ ಕಳಿಸಿ ಸೆಕ್ಸ್​​ ಟಾರ್ಚರ್ ನೀಡಿರುವ ಆರೋಪ ಕೇಳಿಬಂದಿದೆ. ಗುಪ್ತಾಂಗದ ಫೋಟೋ ಕಳಿಸಿ ಟಾರ್ಚರ್ ಮಾಡ್ತಿದ್ದ ವ್ಯಕ್ತಿ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಆರೋಪಿ ನವೀನ್
           ಆರೋಪಿ ನವೀನ್

ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ನಟಿಸಿರುವ ಜನಪ್ರಿಯ ನಟಿಯೊಬ್ಬರಿಗೆ ಕಳೆದ ಮೂರು ತಿಂಗಳಿಂದ ಫೇಸ್‌ಬುಕ್‌ನಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. NAVEENZ ಎಂಬ ಆಸಾಮಿ ಫೇಸ್‌ಬುಕ್ ಐಡಿಯಿಂದ ನಟಿಗೆ ಮೊದಲು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ನಟಿ ಈ ರಿಕ್ವೆಸ್ಟ್ ಅನ್ನು ಸ್ವೀಕರಿಸದಿದ್ದು, ಬಳಿಕ ಮೆಸೆಂಜರ್‌ನಲ್ಲಿ ಅಶ್ಲೀಲ ಸಂದೇಶಗಳು ಮತ್ತು ಗುಪ್ತಾಂಗದ ಫೋಟೋಗಳನ್ನು ಕಳುಹಿಸಿ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ.

ಮೆಸೆಂಜರ್‌ನಲ್ಲಿ‌ ಮೆಸೇಜ್ ಮಾಡದಂತೆ ನಟಿ ಆತನಿಗೆ ಎಚ್ಚರಿಕೆ ನೀಡಿದರೂ, ಆತ ಬೇರೆ ಬೇರೆ ಐಡಿಗಳಿಂದ ಮತ್ತೆ ಅಶ್ಲೀಲ ಫೋಟೋ ಮತ್ತು ಗುಪ್ತಾಂಗದ ವೀಡಿಯೊಗಳನ್ನು ಕಳುಹಿಸಿ ತನ್ನ ವಿಕೃತಿ ಮುಂದುವರೆಸಿದ್ದಾನೆ.

ಸತತ ಲೈಂಗಿಕ ಕಿರುಕುಳದಿಂದ ಬೇಸತ್ತ ನಟಿ, ಕಾಮುಕನಿಗೆ ಬುದ್ಧಿ ಹೇಳಿದ್ದರು. ಅದರಂತೆ, ನವೆಂಬರ್ 1 ರಂದು ಬೆಳಗ್ಗೆ ಸುಮಾರು 11.30ಕ್ಕೆ ನಾಗರಭಾವಿಯ ನಂದನ್ ಪ್ಯಾಲೆಸ್ ಬಳಿ ಆರೋಪಿಯನ್ನು ನೇರವಾಗಿ ಭೇಟಿಯಾಗಿದ್ದಾರೆ. ಈ ರೀತಿ ಅಶ್ಲೀಲ ಮೆಸೇಜ್ ಮಾಡುವುದು ಬೇಡ ಎಂದು ನಟಿ ಎಚ್ಚರಿಕೆ ನೀಡಿದ್ದಾರೆ. ಆದರೆ, ನಟಿಯ ಮಾತನ್ನು ಆತ ಲೆಕ್ಕಿಸದೆ ಮತ್ತೆ ಅದೇ ರೀತಿ ಕಿರುಕುಳ ಮುಂದುವರೆಸಿದ್ದಾನೆ. ನಂತರ, ಲೈಂಗಿಕ ಕಿರುಕುಳ ಹಿನ್ನಲೆ ನಟಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ಲಿಫ್ಟ್‌ನಲ್ಲಿ ನಾಯಿಮರಿ ಕೊಲೆ – ಭೀಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆ ಮಹಿಳೆ ಬಂಧನ!

Btv Kannada
Author: Btv Kannada

Read More