ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಟನಲ್ ರೋಡ್ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಲಾಲ್ ಬಾಗ್ ಗೇಟ್ ಬಳಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರ ನಡೆ ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಪ್ರತಿಭಟನೆ ಮತ್ತು ಮೆರವಣಿಗೆಗಳನ್ನು ನಿಷೇಧಿಸಿರುವ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದರೂ ಪ್ರತಿಭಟನಾಕಾರರ ವಿರುದ್ಧ FIR ದಾಖಲಿಸದಿರುವುದು ಪೊಲೀಸರ ಪಕ್ಷಪಾತ ಧೋರಣೆ ಎತ್ತಿ ತೋರಿಸುತ್ತಿದೆ.

ಕರ್ನಾಟಕ ಹೈಕೋರ್ಟ್ ಆದೇಶದ ಪ್ರಕಾರ, ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಇತರ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ ಅಥವಾ ಪ್ರದರ್ಶನ ಮಾಡುವಂತಿಲ್ಲ. ಆದ್ರೆ ಇವತ್ತು ಲಾಲ್ ಬಾಗ್ ಬಳಿ ಟನಲ್ ರಸ್ತೆ ಯೋಜನೆ ವಿರೋಧಿಸಿ ಡಿ.ಕೆ. ಶಿವಕುಮಾರ್ ವಿರುದ್ಧ ನೂರಾರು ಜನರು ಸತತ 2 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಗೆ ಅನುಮತಿ ಇರಲಿಲ್ಲ. ಪ್ರತಿಭಟನೆ ಸಂದರ್ಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರೂ, ಸ್ಥಳಕ್ಕೆ ಬಂದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ವಾಪಸ್ ಹೋಗಿದ್ದಾರೆ. ಹೈಕೋರ್ಟ್ ಆದೇಶ ಸ್ಪಷ್ಟವಾಗಿ ಉಲ್ಲಂಘಿಸಿದ್ದರೂ, ಬೆಂಗಳೂರು ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಒಂದೇ ಒಂದು FIR ದಾಖಲು ಮಾಡಿಲ್ಲ.

ಜಯನಗರದ ಶ್ರೀಮಂತರು ಮತ್ತು ಕೆಲವು ಸೆಲೆಬ್ರಿಟಿಗಳು ಪ್ರತಿಭಟನೆಗೆ ಬಂದಿದ್ದಕ್ಕೆ ಪೊಲೀಸರು ಸುಮ್ಮನಿದ್ದಾರೆ ಅವರನ್ನು ಏನೂ ಮಾಡಿಲ್ಲ ನೋಡಿ ಸುಮ್ಮನೇ ಹೋಗಿದ್ದಾರೆ. ಅದೇ ಸಾಮಾನ್ಯ ಜನರು ಪ್ರತಿಭಟನೆ ಮಾಡಿದ್ರೆ ಈ ಪೊಲೀಸರು ಸುಮ್ಮನೆ ಬಿಡ್ತಿದ್ದಾರಾ ಒದ್ದು ಒಳಗೆ ಹಾಕ್ತಿದ್ದರು.

ಇನ್ನು ಡಿಸಿಎಂ ಡಿಕೆಶಿ ಅವರೇ, ಈ ಪೊಲೀಸರೇ ನಿಮ್ಮ ವಿರುದ್ಧ ಇದ್ದಾರೆ, ನಿಮಗೆ ಹಿಗ್ಗಾಮುಗ್ಗಾ ಬೈಯ್ದಿದ್ದಾರೆ. ಹಾಗಾಗಿ ಈಗಲೇ ಇಂಟೆಲಿಜೆನ್ಸ್ ಮೂಲಕ ಪ್ರತಿಭಟನೆಯ ಸಂಪೂರ್ಣ ವಿಡಿಯೋ ತರಿಸಿಕೊಂಡು ಕಾನೂನು ಉಲ್ಲಂಘಿಸಿ ಪ್ರತಿಭಟನೆ ಮಾಡಿದವರ ವಿರುದ್ಧ FIR ಮಾಡಿಸಿ ಅರೆಸ್ಟ್ ಮಾಡಿಸಿ. ಕಾನೂನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ರೂ ಸುಮ್ಮನಿದ್ದ ಜಯನಗರ ಇನ್ಸ್ಪೆಕ್ಟರ್, ACP, ಇತರ ಪೊಲೀಸ್ ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿಸಿ ಜನ ಸಾಮಾನ್ಯರ ನಂಬಿಕೆ ಗಳಿಸಿ.

ಒಂದು ವೇಳೆ ನೀವು ಪೊಲೀಸರ ಮೇಲೆ ಕ್ರಮ ಕೈಗೊಳ್ಳದಿದ್ದರೆ, ನಾಳೆಯಿಂದ ಬೆಂಗಳೂರಿನಲ್ಲಿ ಸಾರ್ವಜನಿಕರು ತಮಗೆ ಬೇಕಾದಲ್ಲಿ ಪ್ರತಿಭಟನೆ ಮತ್ತು ಧರಣಿಗಳನ್ನು ಆರಂಭಿಸುತ್ತಾರೆ. ಈ ಪೊಲೀಸರೇ ಸೈಲೆಂಟ್ ಆಗಿರ್ತಾರೆ ಹಾಗಾಗಿ ಡಿಸಿಎಂ ಡಿಕೆಶಿ ಅವರೇ ಕೂಡಲೇ ಪೊಲೀಸರ ವಿರುದ್ಧ ಸಸ್ಪೆಂಡ್ಗೆ ಸೂಚನೆ ಕೊಡಿ ಅಗತ್ಯ ಕ್ರಮ ಕೈಗೊಂಡು ಬೆಂಗಳೂರಿನ ಶಾಂತಿ ಕಾಪಾಡಿ.
ಇದನ್ನೂ ಓದಿ : 45 ಚಿತ್ರದ ‘AFRO ಟಪಾಂಗ’ ಪ್ರಮೋಷನ್ ಸಾಂಗ್ ಬಿಡುಗಡೆ – ಜಿಟೊ ಕಿಡ್ಸ್ ಜೊತೆ ಶಿವಣ್ಣ, ಉಪ್ಪಿ, ರಾಜ್ ಬಿ. ಶೆಟ್ಟಿ ಭರ್ಜರಿ ಸ್ಟೆಪ್ಸ್!







