ಹ್ಯಾಟ್ರಿಕ್ ಹೀರೋ ಶಿವಣ್ಣ, ಉಪೇಂದ್ರ, ರಾಜ್ ಬಿ. ಶೆಟ್ಟಿ ನಟನೆಯ ’45’ ಸಿನಿಮಾದ ‘ಆಫ್ರೋ ಟಪಾಂಗ್’ ಪ್ರಮೋಷನಲ್ ಸಾಂಗ್ ರಿಲೀಸ್ ಆಗಿದೆ. ಅರ್ಜುನ್ ಜನ್ಯ ನಿರ್ದೇಶನದ ಈ ಸಾಂಗ್ಗೆ ಮೂವರು ಸ್ಟಾರ್ ನಟರು ಭರ್ಜರಿ ಸ್ಟೆಪ್ ಹಾಕಿದ್ದು, ಉಪ್ಪಿ ಹಾಗೂ ಶಿವಣ್ಣ, ರಾಜ್ ಬಿ ಶೆಟ್ಟಿ ಬೇರೆಯದೇ ರೀತಿಯ ಕಾಸ್ಟೂಮ್ ಅಲ್ಲಿ ಮಿಂಚಿದ್ದಾರೆ.

ರಾಜ್ ಬಿ ಶೆಟ್ಟಿ ಕಾಡು ಮನುಷ್ಯರ ರೀತಿನೇ ಕಾಸ್ಟೂಮ್ ತೊಟ್ಟಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಎಂದಿನ ಬೇರೆ ರೀತಿಯ ಕಾಸ್ಟೂಮ್ ಅಲ್ಲಿಯೇ ಇದ್ದಾರೆ. ಆದರೆ, ಶಿವರಾಜ್ ಕುಮಾರ್ ಕಂಪ್ಲೀಟ್ ಗ್ರೇ ಹೇರ್ ಲುಕ್ ಅಲ್ಲಿಯೇ ಇದ್ದಾರೆ. ಆಫ್ರಿಕಾದ ಘೆಟ್ಟೋ ಕಿಡ್ಸ್ ಕುಣಿತ ಸಖತ್ ಆಗಿದೆ. ಕಲರ್‌ಫುಲ್ ಡ್ರೆಸ್ ಹಾಕಿಕೊಂಡು ಶಿವಣ್ಣ ಘೆಟ್ಟೋ ಕಿಡ್ಸ್ ಜೊತೆ ಮಸ್ತ್ ಆಗಿಯೇ ಡ್ಯಾನ್ಸ್ ಮಾಡಿದ್ದಾರೆ.

ಶಿವರಾಜ್‌ಕುಮಾರ್ ಇಲ್ಲಿ ವಿಭಿನ್ನ ಅನಿಸುತ್ತಾರೆ. ಇವರ ಲುಕ್ ಸಡನ್ ಆಗಿಯೇ ಬೇರೆ ರೀತಿನೇ ಫೀಲ್ ಆಗುತ್ತದೆ. ಆದರೆ, ಇಂಟ್ರಸ್ಟಿಂಗ್ ಆಗಿದೆ. ಎಂ.ಸಿ.ಬಿಜ್ಜು ಅವರೇ ಬರೆದು ಇದನ್ನು ಹಾಡಿದ್ದಾರೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತವನ್ನು ಕೊಟ್ಟಿದ್ದಾರೆ.









