ಕಾರು-ಆಟೋ ನಡುವೆ ಭೀಕರ ಅಪಘಾತ – ಬಾಲಕಿ ಸ್ಥಳದಲ್ಲೇ ಸಾವು, ಐವರಿಗೆ ಗಂಭೀರ ಗಾಯ!

ದಕ್ಷಿಣ ಕನ್ನಡ : ಕಾರು-ಆಟೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಕುಂಬ್ರ ಸಮೀಪದ ಪರ್ಪುಂಜದಲ್ಲಿ ನಡೆದಿದೆ. 6 ವರ್ಷದ ಶಜ್ವಾ ಫಾತಿಮಾ ಮೃತಪಟ್ಟ ಬಾಲಕಿ.

ಆಟೋ ರಿಕ್ಷಾ ಚಾಲಕ ಹನೀಫ್ ಬನ್ನೂರು ಮಗಳು ಅಪಘಾತದಲ್ಲಿ ಸಾವನ್ನಪ್ಪಿದ್ದು, ಐವರಿಗೆ ಗಂಭೀರ ಗಾಯವಾಗಿದೆ. ಅವರಲ್ಲಿ ಇಬ್ಬರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಮೂವರಿಗೆ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಪುತ್ತೂರಿನಿಂದ ತಿಂಗಳಾಡಿಗೆ ಆಟೋ ರಿಕ್ಷಾ ತೆರಳುತ್ತಿತ್ತು. ಸುಳ್ಯ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಕಾರಿನ ಚಾಲಕ, ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದ್ದಾನೆ. ಗುದ್ದಿದ ರಭಸಕ್ಕೆ ಆಟೋ ರಿಕ್ಷಾ ಸಂಪೂರ್ಣ ನಜ್ಜು ಗುಜ್ಜಾಗಿದೆ. ಕಾರು ಚಲಾಯಿಸುತ್ತಿದ್ದವರು ಕುಂಬ್ರದಲ್ಲಿರುವ ಬರೋಡಾ ಬ್ಯಾಂಕ್ ಉದ್ಯೋಗಿ.

ಇದನ್ನೂ ಓದಿ : ಟೈಮ್ ಪಾಸ್ ಪ್ರೀತಿ ಬೇಡ, ಮದುವೆ ಆಗೋಣ ಎಂದಿದಕ್ಕೆ ಮಹಿಳೆ ಕೊಲೆ – ಏಳೆಂಟು ಬಾರಿ ಚಾಕುವಿನಿಂದ ಇರಿದು ಹತ್ಯೆಗೈದ ಪ್ರಿಯಕರ!

Btv Kannada
Author: Btv Kannada

Read More